ಇರಾನ್‌ ಕರೆನ್ಸಿ ಭಾರೀ ಕುಸಿತ: 1 ಡಾಲರ್‌ 10,92,500 ರಿಯಾಲ್‌ಗೆ ಸಮ

0
3

ಟೆಹರಾನ್‌: ಇರಾನ್‌ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆ ಮತ್ತು ಅಮೆರಿಕದ ಸುಂಕ ಸಮರದಿಂದಾಗಿ ರಿಯಲ್‌ ಕರೆನ್ಸಿ ಮೌಲ್ಯದಲ್ಲಿ ಭಾರೀ ಕುಸಿತಗೊಂಡಿದ್ದು, ಸದ್ಯ 10,92,500 ರಿಯಾಲ್‌ ಒಂದು ಅಮೆರಿಕನ್‌ ಡಾಲರ್‌ಗೆ ಸಮವಾಗಿದೆ.

ಡಿಸೆಂಬರ್‌ನಲ್ಲಿ ಶೇ. 42.2ಕ್ಕೆ ಏರಿದ ಇರಾನ್‌ ವಾರ್ಷಿಕ ಹಣದುಬ್ಬರದ ವಿಚಾರವನ್ನು ಸರ್ಕಾರ ಬಹಿರಂಗಪಡಿಸದೇ ಮುಚ್ಚಿಟ್ಟಿತ್ತು. ಇದರಿಂದಾಗಿ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಸಿಸಿ ಏಕದಿನ ಕ್ರಿಕೆಟ್‌‌ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕಿಂಗ್

ಇಸ್ರೇಲ್‌ ಜತೆಗಿನ ಹೋರಾಟದಲ್ಲಿ ಇರಾನ್‌ ಹಮಾಸ್‌ಗೆ ಬೆಂಬಲ ನೀಡಿತ್ತು. ಆಗ ಅಮೆರಿಕ ಇರಾನ್‌ ತೈಲ ಮಾರಾಟಕ್ಕೆ ಕಠಿಣ ನಿರ್ಬಂಧ ಹೇರಿತ್ತು. ಹೀಗಾಗಿ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬಿತ್ತು. ಅಲ್ಲದೇ ತೈಲ ರಫ್ತಿಗೆ ನಿರ್ಬಂಧದ ಜತೆಗೆ ವಿದೇಶಿ ಕರೆನ್ಸಿಗೆ ಪ್ರವೇಶ ನಿರ್ಬಂಧಿಸಲಾಯಿತು. ಇದರಿಂದ ಇರಾನ್‌ ಆರ್ಥಿಕ ಹಿಂಜರಿತದ ಬೆದರಿಕೆಯನ್ನು ಎದುರಿಸುತ್ತಿದೆ.

Previous articleಐತಿಹಾಸಿಕ ಕಡಲಯಾನ ಪೂರ್ಣಗೊಳಿಸಿದ INSV ಕೌಂಡಿನ್ಯಾ ಹಡಗು