Home Advertisement
Home ಸುದ್ದಿ ವಿದೇಶ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ

0
4

ಢಾಕಾ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಿ ಭೂಮಿ ಹಂಚಿಕೆಯಲ್ಲಿ ಅಕ್ರಮ ಎಸೆಗಿದ ಆರೋಪದಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಢಾಕಾ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

‘ಪುರ್ಬಾಚಲ್ ನ್ಯೂ ಟೌನ್’ ಸರ್ಕಾರಿ ವಸತಿ ಯೋಜನೆಯಲ್ಲಿ ಅಕ್ರಮ ನಿವೇಶನ ಹಂಚಿಕೆ ಮಾಡಿದ ಆರೋಪದಡಿ ವಿಚಾರಣೆ ನಡೆಸಿದ ಢಾಕಾ ವಿಶೇಷ ನ್ಯಾಯಾಧೀಶರ ನ್ಯಾಯಾಲಯ, ಪ್ರತಿ ಪ್ರಕರಣದಲ್ಲೂ ತಲಾ ಐದು ವರ್ಷಗಳಂತೆ ಒಟ್ಟು 10 ವರ್ಷಗಳ ಶಿಕ್ಷೆ ವಿಧಿಸಿದೆ.

ಅಕ್ರಮದಲ್ಲಿ ಶೇಖ್ ಹಸೀನಾ ಅವರ ಕುಟುಂಬ ಸದಸ್ಯರಿಗೂ ಶಿಕ್ಷೆ ನೀಡಲಾಗಿದ್ದು, ಟುಲಿಪ್ ರಿಜ್ವಾನಾ ಸಿದ್ದಿಕ್ ಮತ್ತು ಶೇಖ್ ರೆಹಾನಾ ತಲಾ ಎರಡು ವರ್ಷಗಳಂತೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಒಂದು ಪ್ರಕರಣದಲ್ಲಿ ಶೇಖ್ ಹಸೀನಾ ಅವರ ಮಗ ರಾದ್ವಾನ್ ಮುಜಿಬ್ ಸಿದ್ದಿಕ್ ಹಾಗೂ ಅಜ್ಮಿನಾ ಸಿದ್ದಿಕ್‌ಗೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಪುರ್ಬಾಚಲ್ ಯೋಜನೆಯಡಿ ಸುಮಾರು 14,400 ಚದರ ಅಡಿ ವಿಸ್ತೀರ್ಣದ ನಿವೇಶನಗಳನ್ನು ಅಧಿಕಾರ ದುರ್ಬಳಕೆಯಿಂದ ನಿಯಮ ಬಾಹಿರವಾಗಿ ಕುಟುಂಬದವರಿಗೆ ಶೇಖ್ ಹಸೀನಾ ಹಂಚಿಕೆ ಮಾಡಿದ್ದಾರೆ ಎಂದ ಆರೋಪ ಇದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಜನವರಿ 2025ರಲ್ಲಿ ಈ ಪ್ರಕರಣ ದಾಖಲಿಸಿತ್ತು.

Previous articleVTU Convocation: ತಾಂತ್ರಿಕ ಪ್ರತಿಭೆಗಳಿಗೆ ನೌಕಾ ಪಡೆಯ ಪ್ರೋತ್ಸಾಹ