ವೆನೆಜುವೆಲಾ: (303 ಬಿಲಿಯನ್ ಬ್ಯಾರೆಲ್): ಸದ್ಯದ ಮಟ್ಟಿಗೆ ಅತಿ ಹೆಚ್ಚು ಜಾಗತಿಕ ತೈಲ ನಿಕ್ಷೇಪ ಇರುವುದು ವೆನೆಜುವೆಲಾದಲ್ಲಿ. ಲಂಡನ್ ಮೂಲದ ಇಂಧನ ಸಂಸ್ಥೆಯ ಪ್ರಕಾರ,ಸುಮಾರು 303 ಬಿಲಿಯನ್ ಇಂಧನ ಬ್ಯಾರಲ್‌ಗಳನ್ನು ಈ ದೇಶ ಹೊಂದಿದೆ. ಅಂದರೆ ಜಗತ್ತಿನ ಶೇ.17ರಷ್ಟು ತೈಲ ನಿಕ್ಷೇಪಗಳನ್ನು ತನ್ನ ಒಡಲಲ್ಲಿ ವೆನೆಜುವೆಲಾ ಇಟ್ಟುಕೊಂಡಿದೆ. ಆದರೆ ಜಾಗತಿಕ ತೈಲ ಉತ್ಪಾದನೆಯಲ್ಲಿ ವೆನೆಜುಲಾದ ಪಾಲು ಬರೀ 1%. ಅತಿ ಹೆಚ್ಚು ನಿಕ್ಷೇಪಗಳಿದ್ದರೂ ಸರಿಯಾದ ನಿರ್ವಹಣೆ ಇಲ್ಲದ ಕಾರಣ ತೈಲ ಉತ್ಪಾದನೆ ಅತಿ ಕಡಿಮೆ ಇದೆ.
ಸೌದಿ ಅರೇಬಿಯಾ: (267 ಬಿಲಿಯನ್ ಬ್ಯಾರೆಲ್): ಸೌದಿ ಅರೇಬಿಯಾ ವಿಶ್ವದ 2ನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. 267 ರಿಂದ 268 ಬಿಲಿಯನ್ ಬ್ಯಾರೆಲ್‌ಗಳು ಇದು ಹೊಂದಿದ್ದು, ಪೂರ್ವ ಪ್ರಾಂತ್ಯದಲ್ಲಿ ಅತಿಹೆಚ್ಚು ನಿಕ್ಷೇಪಗಳಿವೆ. ಇದರಲ್ಲಿ ಬಹುತೇಕ ನಿಕ್ಷೇಪಗಳನ್ನು ಸೌದಿ ಅರಾಮ್ಕೊ ಎಂಬ ಸರ್ಕಾರಿ ತೈಲ ಕಂಪನಿ ನಿರ್ವಹಿಸುತ್ತದೆ.
ಕೆನಡಾ (171 ಬಿ.ಬ್ಯಾರಲ್): ವೆನೆಜುವೆಲಾ, ಸೌದಿ ಅರೇಬಿಯಾ ಬಿಟ್ಟರೆ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶ ಕೆನಡಾ. 170-171 ಬಿಲಿಯನ್ ತೈಲ ಬ್ಯಾರಲ್‌ಗಳನ್ನು ಈ ದೇಶ ಹೊಂದಿದ್ದು, ಅದರಲ್ಲಿ 166 ಬಿ.ಬ್ಯಾರಲ್‌ಗಳು ಮರಳು ರೂಪದಲ್ಲಿವೆ.
ಇರಾನ್ (157 ಬಿ.ಬ್ಯಾರಲ್): ಇರಾನ್ ಗಣನೀಯ ಪ್ರಮಾಣದ ಸಾಬೀತಾದ ತೈಲ ನಿಕ್ಷೇಪಗಳನ್ನು ಹೊಂದಿದ್ದು, ಅಂದಾಜು 157ಕ್ಕಿಂತ ಹೆಚ್ಚು ಬಿಲಿಯನ್ ತೈಲ ಬ್ಯಾರೆಲ್‌ಗಳನ್ನು ತನ್ನ ಹತ್ತಿರ ಇಟ್ಟುಕೊಂಡಿದೆ. ಆ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ದಿನಕ್ಕೆ 1.4 ಮಿಲಿಯನ್‌ನಿಂದ 2 ಮಿಲಿಯನ್ ಬ್ಯಾರೆಲ್‌ಗಳನ್ನು ಇರಾನ್ ವಿವಿಧ ದೇಶಗಳಿಗೆ ರಫ್ತು ಮಾಡುತ್ತದೆ.
ಇರಾಕ್ (148 ಬಿ.ಬ್ಯಾರಲ್): ಇರಾಕ್ ವಿಶ್ವದ ಐದನೇ ಅತಿದೊಡ್ಡ ಸಾಬೀತಾದ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದ್ದು, ಅಂದಾಜು 145 ಬಿಲಿಯನ್ ಬ್ಯಾರೆಲ್‌ಗಳನ್ನು ಇಟ್ಟುಕೊಂಡಿದೆ. ದಿನಕ್ಕೆ 3.6 ಮಿಲಿಯನ್ ಬ್ಯಾರೆಲ್‌ಗಳನ್ನು ಇರಾಕ್ ವಿವಿಧ ದೇಶಗಳಿಗೆ ರಫ್ತು ಮಾಡುತ್ತದೆ.
ಕುವೈತ್ (101 ಬಿ.ಬ್ಯಾರಲ್): ಕುವೈತ್‌ನಲ್ಲಿ ಅಪಾರ ತೈಲ ನಿಕ್ಷೇಪಗಳಿವೆ. ಅಂದಾಜು 101.5 ರಿಂದ 102 ಬಿಲಿಯನ್ ಬ್ಯಾರೆಲ್‌ಗಳನ್ನು ಈ ದೇಶ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಖನಿಜ ಹಿಡುವಳಿದಾರರಲ್ಲಿ ಒಂದಾಗಿದ್ದು, ಜಾಗತಿಕವಾಗಿ ಸಾಬೀತಾಗಿರುವ ಮೀಸಲುಗಳಲ್ಲಿ ಸರಿಸುಮಾರು 6-9% ಅನ್ನು ಹೊಂದಿದೆ.
ಯುಎಇ (113 ಬಿಲಿಯನ್ ಬ್ಯಾರಲ್) : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಣನೀಯ ಪ್ರಮಾಣದ ತೈಲ ನಿಕ್ಷೇಪಗಳನ್ನು ಹೊಂದಿದೆ. ಅಂದಾಜು 113 ಬಿಲಿಯನ್ ಬ್ಯಾರೆಲ್‌ಗಳು ಪ್ರಸ್ತುತ ಈ ದೇಶದ ಬಳಿ ಇವೆ. ಈ ತೈಲ ನಿಕ್ಷೇಪ ಮೀಸಲುಗಳಲ್ಲಿ ಸುಮಾರು 96% ಅಬುಧಾಬಿಯ ಎಮಿರೇಟ್‌ನಲ್ಲಿವೆ. ನಿತ್ಯ 2.5 ಮಿಲಿಯನ್ ಬ್ಯಾರಲ್ ರಫ್ತಾಗುತ್ತದೆ.
ರಷ್ಯಾ (80 ಬಿಲಿಯನ್ ಬ್ಯಾರಲ್): ರಷ್ಯಾ ಗಮನಾರ್ಹ ತೈಲ ನಿಕ್ಷೇಪಗಳನ್ನು ಹೊಂದಿದೆ, ಸುಮಾರು 80 ಬಿಲಿಯನ್ ಬ್ಯಾರೆಲ್‌ಗಳು ಈ ದೇಶದ ಬಳಿ ಇವೆ. ಅಗ್ರ ಜಾಗತಿಕ ಉತ್ಪಾದಕರಾಗಿದ್ದು, ಯುಎಸ್ ಮತ್ತು ಸೌದಿ ಅರೇಬಿಯಾ ನಂತರ ಮೂರನೇ ಸ್ಥಾನದಲ್ಲಿದೆ. ದಿನಕ್ಕೆ 5 ಮಿಲಿಯನ್‌ಗಿಂತಲೂ ಹೆಚ್ಚು ಬ್ಯಾರೆಲ್‌ಗಳನ್ನು ರಷ್ಯಾ ರಫ್ತು ಮಾಡುತ್ತದೆ.
ಲಿಬಿಯಾ (48 ಬಿಲಿಯನ್ ಬ್ಯಾರಲ್): ಲಿಬಿಯಾ ಆಫ್ರಿಕಾದ ಅತಿದೊಡ್ಡ ಸಾಬೀತಾದ ತೈಲ ನಿಕ್ಷೇಪಗಳನ್ನು ಹೊಂದಿದ್ದು, 48 ಬಿಲಿಯನ್ ಬ್ಯಾರೆಲ್‌ಗಳು ಈ ದೇಶದ ಹತ್ತಿರ ಇವೆ. ಹತ್ತಿರತ್ತಿರ 1 ಮಿಲಿಯನ್ ಬ್ಯಾರನ್‌ಗಳನ್ನು ಲಿಬಿಯಾ ನಿತ್ಯವೂ ರಫ್ತು ಮಾಡುತ್ತದೆ.
ನೈಜೀರಿಯಾ (38 ಬಿ.ಬ್ಯಾರಲ್): ನೈಜೀರಿಯಾ ಗಣನೀಯ ಪ್ರಮಾಣದ ಸಾಬೀತಾದ ತೈಲ ನಿಕ್ಷೇಪಗಳನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ 37 ರಿಂದ 38 ಬಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಈ ದೇಶ ತನ್ನ ಬಳಿ ಹೊಂದಿದೆ. ಆ ಮೂಲಕ ಜಾಗತಿಕವಾಗಿ ಹತ್ತನೇ ಸ್ಥಾನದಲ್ಲಿದೆ.
ಭಾರತದ ಬಳಿ 4.9 ಬಿಲಿಯನ್ ಬ್ಯಾರಲ್ ತೈಲ ಇದೆ





















