ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟನಲ್ಲಿ ಇದೇ ೧೯ರಿಂದ ೨೦೨೩ನೇ ಸಾಲಿನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆರಂಭಗೊಂಡಿದ್ದು, ಭಾರತದ ಒಲಿಂಪಿಕ್ ಹಾಗೂ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಕ್ರೀಡಾಕೂಟದ ಅರ್ಹತಾ ಸುತ್ತುಗಳಲ್ಲಿ ಸೆಣೆಸಾಡಲು ಶುಕ್ರವಾರದಿಂದ ಮೈದಾನಕ್ಕಿಳಿದಿದ್ದಾರೆ.
ನೀರಜ್ ಅವರು ಶುಕ್ರವಾರ ನಡೆದ `ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ೮೮.೭೭ಮೀಟರ್ ಜಾವೆಲಿನ್ ಎಸೆದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದರು. ಈ ಬಾರಿ ಚಿನ್ನದ ಪದಕದ ಸ್ಪರ್ಧಿಯಾಗಿರುವ ನೀರಜ್ ಈಗ ೨೦೨೪ರಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ಗೂ ಅರ್ಹತೆ ಗಳಿಸಿದ್ದಾರೆ.