ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿಯನ್ನೂ ಅಪಹರಿಸುತ್ತಾರಾ? ಎಂದು ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಪ್ರಶ್ನಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ವರದಿಗಾರರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಪೃಥ್ವಿರಾಜ್ ಚೌಹಾಣ್ ಭಾರತ-ಅಮೆರಿಕ ವ್ಯಾಪಾರ ಜಟಾಪಟಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ನಿಕೋಲಸ್ ಮಡುರೊ ಅವರನ್ನು ಅಪಹರಿಸಿದಂತೆ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಅಪಹರಿಸುತ್ತಾರಾ?” ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಾಟೆ: ಪೋಸ್ಟ್‌ಮಾರ್ಟ್ಂ ನಡೆದಿದ್ದು ಒಂದೇ ಬಾರಿ
“ಭಾರತದ ಮೇಲೆ ಅಮೆರಿಕ ಭಾರೀ ಸುಂಕವನ್ನು ಹೇರಿದೆ. ಇದರಿಂದಾಗಿ ಸುಲಭ ವ್ಯಾಪಾರ ವಹಿವಾಟು ಸಾಧ್ಯವಾಗದಂತೆ ಮಾಡುತ್ತದೆ. ಇದರಿಂದಾಗಿ ಭಾರತ ಪರ್ಯಾಯ ರಫ್ತು ಮಾರುಕಟ್ಟೆ ಹುಡುಕುವಂತೆ ಆಗುತ್ತದೆ. ಹಾಗಾದರೆ, ವೆನೆಜುವೆಲಾದಲ್ಲಿ ನಡೆದಂತಹ ಘಟನೆಯೇ ಭಾರತದಲ್ಲಿ ನಡೆಯುತ್ತದೆಯೇ? ಟ್ರಂಪ್ ನಮ್ಮ ದೇಶದ ಪ್ರಧಾನಿಯನ್ನು ಕೂಡ ಅಪಹರಿಸುತ್ತಾರೆಯೇ?” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಟ್ರಂಪ್ ಅಪಹರಿಸುವ ಬಗ್ಗೆ ಪೃಥ್ವಿರಾಜ್ ಚೌಹಾಣ್ ಲಘುವಾಗಿ ಮಾತನಾಡಿದ್ದಾರೆಂದು ನೆಟ್ಟಿಗರು ಗರಂ ಆಗಿದ್ದು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.






















