ದೇಶದ 12 ರಾಜ್ಯಗಳಲ್ಲಿ ಶೀಘ್ರದಲ್ಲೇ SIR ಪ್ರಕ್ರಿಯೆ ಆರಂಭ

1
263

ನವದೆಹಲಿ: ಬಿಹಾರದಲ್ಲಿ ಯಶಸ್ವಿಯಾಗಿ ನಡೆಸಿದ Special Intensive Revision (SIR) ಪ್ರಕ್ರಿಯೆಯ ಬಳಿಕ, ಈಗ ಚುನಾವಣಾ ಆಯೋಗವು ಮುಂದಿನ ಹಂತದತ್ತ ಕಾಲಿಟ್ಟಿದೆ. ಮುಂದಿನ 1 ರಿಂದ 2 ವರ್ಷಗಳೊಳಗೆ ಚುನಾವಣೆ ನಡೆಯಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಘೋಷಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣಾ ಕಾನೂನಿನ ಪ್ರಕಾರ ಮತದಾರರ ಪಟ್ಟಿ ಶುದ್ಧೀಕರಣ ಅತ್ಯವಶ್ಯಕ. ಕಳೆದ ಎರಡು ದಶಕಗಳಲ್ಲಿ ದೇಶದ ಜನಸಂಖ್ಯೆ ಮತ್ತು ವಾಸಸ್ಥಳದ ಬದಲಾವಣೆಗಳು ಗಣನೀಯವಾಗಿವೆ. ಅನೇಕರು ಸ್ಥಳಾಂತರಗೊಂಡಿದ್ದಾರೆ, ಕೆಲವರು ವಿದೇಶಗಳಿಗೆ ತೆರಳಿದ್ದಾರೆ, ಕೆಲವರ ಮರಣವಾದರೂ ಅವರ ಹೆಸರುಗಳು ಪಟ್ಟಿಯಲ್ಲಿ ಉಳಿದುಕೊಂಡಿವೆ. ಈ ಎಲ್ಲ ಅಸಂಗತತೆಗಳನ್ನು ಸರಿಪಡಿಸಲು SIR ಪ್ರಕ್ರಿಯೆ ಅಗತ್ಯವಿದೆ” ಎಂದು ಹೇಳಿದರು.

ಅವರು ಮುಂದುವರಿದು, “ಇಲ್ಲಿಯವರೆಗೆ ಒಟ್ಟು ಎಂಟು ಬಾರಿ SIR ಪ್ರಕ್ರಿಯೆ ನಡೆಸಲಾಗಿದೆ, ಕೊನೆಯದಾಗಿ 2002-2004ರಲ್ಲಿ ನಡೆದಿತ್ತು. ಇಪ್ಪತ್ತು ವರ್ಷಗಳ ಬಳಿಕ ಮರು ಪ್ರಾರಂಭವಾಗುತ್ತಿರುವುದು ಪ್ರಜಾಪ್ರಭುತ್ವದ ಪಾವಿತ್ರ್ಯ ಕಾಪಾಡುವ ಮಹತ್ವದ ಹೆಜ್ಜೆ” ಎಂದು ಹೇಳಿದರು.

SIR ಪ್ರಕ್ರಿಯೆ ಕೈಗೊಳ್ಳಲಿರುವ ಪ್ರದೇಶಗಳು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪ. ಮತದಾರರ ಪಟ್ಟಿಯನ್ನು ಶುದ್ಧೀಕರಿಸಿ ನಿಖರವಾದ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

Previous articleಕ್ರಿಕೆಟ್ ಲೋಕದ ‘ನ್ಯಾಷನಲ್ ಕ್ರಶ್’ ಸಂಗೀತ ನಿರ್ದೇಶಕನಿಗೆ ಕ್ಲೀನ್ ಬೌಲ್ಡ್
Next article‘ಕಾಂತಾರ: ಚಾಪ್ಟರ್ 1’ ಈಗ ಓಟಿಟಿಗೆ ಬರಲು ಸಜ್ಜು

1 COMMENT

LEAVE A REPLY

Please enter your comment!
Please enter your name here