ಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ಗೆ ಗೆಲುವು

0
84

ಹೊಸದಿಲ್ಲಿ: ಭಾರತದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 15 ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲುವು ಸಾಧಿಸಿದ್ದಾರೆ.

68 ವರ್ಷದ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು 452 ಮತಗಳನ್ನು ಪಡೆಯುವ ಮೂಲಕ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ ಅವರನ್ನು ಭಾರೀ ಅಂತರದಿಂದ ಪರಾಭವಗೊಳಿಸಿದರು.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ)ಯಿಂದ ಕಣಕ್ಕಿಳಿದಿದ್ದ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಚಲಾವಣೆಯಾದ 767 ಮತಗಳಲ್ಲಿ 452 ಮತಗಳನ್ನು ಪಡೆದು 152 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದರೆ 15 ಮತಗಳು ಅಸಿಂಧುವಾಗಿವೆ ಎಂದು ವರದಿಯಾಗಿದೆ.

ಸಿ.ಪಿ. ರಾಧಾಕೃಷ್ಣನ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎ, ಬಿಜೆಪಿಯ ನಾಯಕರು ಮತ್ತು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ವಲಯದಲ್ಲಿ ʻಸಿಪಿಆರ್’ ಎಂದೇ ಹೆಸರು ಪಡೆದಿರುವ, 68 ವರ್ಷ ವಯಸ್ಸಿನ ಸಿ.ಪಿ. ರಾಧಾಕೃಷ್ಣನ್ ಆರ್‌ಎಸ್‌ಎಸ್ ಕಟ್ಟಾಳು, ಬಿಜೆಪಿ ನಿಷ್ಠ. ಸಾರ್ವಜನಿಕ ಜೀವನದಲ್ಲಿ ಐದು ದಶಕಗಳಷ್ಟು ಅನುಭವ ಹೊಂದಿದ್ದಾರೆ. ಅವರನ್ನು ಅವರ ಬೆಂಬಲಿಗರು ʻತಮಿಳುನಾಡಿನ ವಾಜಪೇಯಿ’ ಎಂದೂ ಕರೆಯುತ್ತಾರೆ.

ತಮಿಳುನಾಡಿನ ತಿರುಪ್ಪುರ್‌ನವರಾದ ರಾಧಾಕೃಷ್ಣನ್ ಅವರು ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಯಮತ್ತೂರಿನ ಸಂಸದರಾಗಿ, ಮಹಾರಾಷ್ಟ್ರ, ಜಾರ್ಖಂಡ್ ಗವರ್ನರ್ ಆಗಿದ್ದರು.

Previous articleNamma Metro: ಹಳದಿ ಮಾರ್ಗಕ್ಕೆ 4ನೇ ರೈಲು, ವೇಳಾಪಟ್ಟಿ ಪರಿಷ್ಕರಣೆ
Next articleಅಕ್ರಮ ಹಣ ವರ್ಗಾವಣೆ: ಶಾಸಕ ಸತೀಶ್ ಸೈಲ್ ಮತ್ತೆ ಇಡಿ ವಶಕ್ಕೆ

LEAVE A REPLY

Please enter your comment!
Please enter your name here