Home Advertisement
Home ಸುದ್ದಿ ದೇಶ ಯುಜಿಸಿ ಹೊಸ ಮಾರ್ಗಸೂಚಿ: ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು

ಯುಜಿಸಿ ಹೊಸ ಮಾರ್ಗಸೂಚಿ: ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು

0
5

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ -2026” ಹೊಸ ಮಾರ್ಗಸೂಚಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿವೆ. ಅಲ್ಲದೇ ಇದರ ವಿರೋಧವಾಗಿ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಿಯಮಗಳು ಕೇವಲ ಕೆಲವು ನಿರ್ದಿಷ್ಟ ವರ್ಗಗಳಿಗೆ ಮಾತ್ರ ಪ್ರಯೋಜನಕಾರಿಯಾಗಿವೆ ಮತ್ತು ಉಳಿದವರಿಗೆ ತಾರತಮ್ಯ ಮಾಡುತ್ತಿವೆ ಎಂದು ದೇಶದಾದ್ಯಂತ ಪ್ರತಿಭಟನೆಗಳು ಬುಗಿಲೆದ್ದಿದೆ.

2026ರ ಜನವರಿ 15 ರಂದು ಯುಜಿಸಿ ಅಧಿಕೃತವಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ʼವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ(ಒಬಿಸಿ) ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆʼ ಎಂದು ಆರೋಪಿಸಲಾಗಿದೆ.

ಹೈಕೋರ್ಟ್‌ನಲ್ಲಿ ವಕೀಲರ ಪ್ರತಿಭಟನೆ: ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ ನಿಯಂತ್ರಣ ಮಸೂದೆ, 2026ರ ವಿರುದ್ಧ ನೂರಾರು ವಕೀಲರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತರು ಯುಜಿಸಿ ಕಾಯಿದೆ ವಿರುದ್ಧ ಘೋಷಣೆಗಳನ್ನು ಕೂಗಿ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಅವು ಶಿಕ್ಷಣ ವ್ಯವಸ್ಥೆಗೆ ಅನ್ಯಾಯ ಮತ್ತು ಹಾನಿಕಾರಕವಾಗಿವೆ ಎಂದು ಆರೋಪಿಸಿದರು.

ದೇಶಾದ್ಯಂತ ಯುಜಿಸಿ ಕಾಯಿದೆಗೆ ಹೆಚ್ಚುತ್ತಿರುವ ವಿರೋಧಕ್ಕೆ ಈ ಪ್ರತಿಭಟನೆ ಮತ್ತಷ್ಟು ಕಾರಣವಾಗಿದ್ದು, ವಿದ್ಯಾರ್ಥಿಗಳು, ವಕೀಲರು ಮತ್ತು ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ UGC ಮಾರ್ಗಸೂಚಿಗಳನ್ನು ಹಿಂತೆಗೆದುಕೊಳ್ಳಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಿವೆ.

Previous articleಧಾರವಾಡ: ಹುಚ್ಚು ನಾಯಿ ಕಡಿತ 9 ಜನರಿಗೆ ಗಂಭೀರ ಗಾಯ
Next articleಎರಡನೇ ಮದುವೆಗೆ ಮನೆಯವರ ವಿರೋಧ: ಪ್ರೇಮಿಗಳ ಆತ್ಮಹತ್ಯೆ