Indian Navy: ನೌಕಾಪಡೆಗೆ ಇನ್ನೆರಡು ಸ್ವದೇಶಿ ನೌಕೆಗಳ ಸೇರ್ಪಡೆ

0
28

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಅತ್ಯಾಧುನಿಕ ಯುದ್ಧ ನೌಕೆಗಳಾದ ಐಎನ್‌ಎಸ್ ಉದಯಗಿರಿ ಹಾಗೂ ಐಎನ್‌ಎಸ್ ಹಿಮಗಿರಿಯನ್ನು ನೌಕಾಪಡೆಗೆ ಮಂಗಳವಾರ ನಿಯೋಜಿಸಲಾಗಿದೆ.

ಐಎನ್‌ಎಸ್ ಉದಯಗಿರಿ ಯುದ್ಧನೌಕೆಯನ್ನು ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್‌ ನಿರ್ಮಿಸಿದೆ. ಐಎನ್‌ಎಸ್ ಹಿಮಗಿರಿಯನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್‌ ಮತ್ತು ಇಂಜನಿಯರ್ಸ್‌ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಎರಡು ಯುದ್ಧನೌಕೆಗಳನ್ನು ಏಕಕಾಲಕ್ಕೆ ನಿಯೋಜನೆ ಮಾಡಲಾಗಿದೆ.

ಇದರೊಂದಿಗೆ ದೇಶದ ಕೈಗಾರಿಕೆ, ತಾಂತ್ರಿಕ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ಪ್ರಾದೇಶಿಕ ಶಕ್ತಿ ಸಮತೋಲನ ಪ್ರದರ್ಶಿಸುವ ಮೂರು ಯುದ್ಧ ನೌಕೆಗಳ ಸ್ಕ್ವಾರ್ಡನ್ ಭಾರತ ಹೊಂದಿದಂತಾಗಿದೆ.

ವಿಶೇಷತೆಗಳು:

  • ಉದಗಿರಿಯು ವಾರ್‌ಶಿಪ್ ಡಿಸೈನ್ ಬ್ಯುರೋ ವಿನ್ಯಾಸದ 100ನೇ ಸ್ವದೇಶಿದಲ್ಲಿ ನಿರ್ಮಾಣವಾದ ಐಎನ್‌ಎಸ್ ಯುದ್ಧ ನೌಕೆ.
  • ಹಿಂದಿನ ಐಎನ್‌ಎಸ್ ಯುದ್ಧನೌಕೆಗಳಿಗಿಂತ ಶೇ. 5ರಷ್ಟು ದೊಡ್ಡದಾಗಿವೆ.
  • 200ಕ್ಕೂ ಹೆಚ್ಚು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳು ಭಾಗಿಯಾಗಿದ್ದವು. 4 ಸಾವಿರ ನೇರ ಹಾಗೂ 10 ಸಾವಿರಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು.
  • ಐನ್‌ಎಸ್ ಉದಯಗಿರಿ, ಹಿಮಗಿರಿ 6700 ಟನ್ ತೂಕದ್ದಾಗಿವೆ.
Previous articleಚಿತ್ರದುರ್ಗ: 97 ಲಕ್ಷ ಹಣದೊಂದಿಗೆ ಪರಾರಿ, ಕ್ಯಾಬ್ ಚಾಲಕ ಬಂಧನ
Next articleಐಪಿಎಲ್‌ ಪಂದ್ಯಗಳಿಗೆ ವಿದಾಯ ಘೋಷಿಸಿದ ಆರ್‌.ಅಶ್ವಿನ್‌

LEAVE A REPLY

Please enter your comment!
Please enter your name here