ಪಾಲಿಯೆಸ್ಟರ್ ವಸ್ತ್ರ ಪೂರೈಸಿ 54 ಕೋಟಿ ರೂ. ವಂಚನೆ
ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಂ (ಟಿ.ಟಿ.ಡಿ) ಆಡಳಿತ ಮಂಡಳಿಗೆ ಮಲ್ಬರಿ ರೇಷ್ಮೆ ವಸ್ತçದ ಹೆಸರಿನಲ್ಲಿ ಒಂದು ದಶಕದಿಂದಲೂ ಸುಮಾರು 54 ಕೋಟಿ ರೂ. ವಂಚಿಸಿರುವ ಗುತ್ತಿಗೆದಾರನೊಬ್ಬನ ಪ್ರಕ ರಣ ಬೆಳಕಿಗೆ ಬಂದಿದ್ದು, ಟಿ.ಟಿ.ಡಿ ಇದೀಗ ಪ್ರಕರಣವನ್ನು ಎಸಿಬಿ ತನಿಖೆಗೆ ಒಪ್ಪಿಸಲು ಸರ್ಕಾರಕ್ಕೆ ಆಗ್ರಹಿಸಿದೆ. ದಾನಿಗಳು ಮತ್ತು ದೇವಸ್ಥಾನದ ವೇದಾ ಶೀರ್ವಾದಂ' ಪೂಜಾ ಪದ್ಧತಿಗಳಲ್ಲಿ ಬಳಕೆಯಾಗುವ ಶಾಲುಗಳು ಮಲ್ಬರಿ ರೇಷ್ಮೆಯದ್ದೇ ಆಗಿರಬೇಕು. ಎನ್ನುವ ಟೆಂಡರ್‌ನ ಷರತ್ತನ್ನು ಮರೆಮಾಚಿ ಗುತ್ತಿಗೆದಾರನುಮಲ್ಬರಿ ರೇಷ್ಮೆ’ ಎಂದೇ ಬಿಲ್ ಮಾಡಿ ಅಪ್ಪಟ ಪಾಲಿಯೆಸ್ಟರ್ ಶಾಲುಗಳನ್ನು ಪೂರೈಸಿದ್ದಾನೆ.
2015 ರಿಂದ ಈವರೆಗೆ ಒಂದು ದಶಕದಿಂದಲೂ ಈ ವಂಚನೆ ನಡೆದಿದ್ದು, ಆಡಳಿತ ಮಂಡಳಿಗೆ ಸುಮಾರು 54 ಕೋಟಿ ರೂ. ವಂಚಿಸಲಾಗಿದೆ. 350 ರೂ. ಬೆಲೆಯ ಶೇ.100 ಪಾಲಿಯೆಸ್ಟರ್ ಶಾಲನ್ನು 1300 ರೂ.ಬೆಲೆಯ `ಮಲ್ಬರಿ ರೇಷ್ಮೆ’ ಎಂದು ಬಿಲ್ ಮಾಡಿರುವ ಪಿತೂರಿಯು ಆಂತರಿಕ ಗುಪ್ತಚರ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.
`ಈವರೆಗೆ ನಕಲಿ ರೇಷ್ಮೆ ಶಾಲುಗಳನ್ನು ಪೂರೈಸಿರುವ ಪ್ರಕರಣವನ್ನು ಎಸಿಬಿ (ಭ್ರಷ್ಟಾಚಾರ ವಿರೋಧಿ ದಳ) ತನಿಖೆಗೆ ಒಳಪಡಿಸಬೇಕೆಂದು ಸರ್ಕಾರಕ್ಕೆ ಕೋರಲಾಗಿದೆ’ ಎಂದು ಟಿ.ಡಿ.ಡಿ. ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.
ನಕಲಿ ಎಂದು ಲ್ಯಾಬಲ್ಲಿ ದೃಢ: ಮಲ್ಬರಿ ರೇಷ್ಮೆ ಎಂದು ಬಿಲ್ ಮಾಡಿ ಪೂರೈಸಿರುವ ಶಾಲುಗಳ ಸ್ಯಾಂಪಲ್ಲನ್ನು ವೈಜ್ಞಾನಿಕ ಪರಿಶೀಲನೆಗೆಂದು 2 ಪ್ರಯೋಗಾಲಯಗಳಿಗೆ ರವಾನಿಸಲಾಗಿತ್ತು. ಸಿಎಸ್‌ಬಿ (ಕೇಂದ್ರ ರೇಷ್ಮೆ ಮಂಡಳಿ) ಪ್ರಯೋಗಾಲಯ ಸೇರಿದಂತೆ ಎರಡೂ ಕಡೆಗಳಿಂದಲೂ ಬಂದ ವರದಿಗಳು `ಇವು ರೇಷ್ಮೆಯಲ್ಲ ಪಾಲಿಯೆಸ್ಟರ್ ಶಾಲುಗಳು’ ಎಂದು ದೃಢಪಡಿಸಿವೆ.





















