Home Advertisement
Home ಸುದ್ದಿ ದೇಶ ಕೊರಿಯನ್ ವಿಡಿಯೋ ಗೇಮ್‌ಗೆ ಮೂವರು ಮಕ್ಕಳು ಆತ್ಮಹತ್ಯೆ

ಕೊರಿಯನ್ ವಿಡಿಯೋ ಗೇಮ್‌ಗೆ ಮೂವರು ಮಕ್ಕಳು ಆತ್ಮಹತ್ಯೆ

0
185

ಗಾಜಿಯಾಬಾದ್: ಕೊರಿಯನ್ ಸಿನಿಮಾ, ಸಿರೀಸ್ ಹಾಗೂ ಗೇಮ್‌ಗಳ ಹುಚ್ಚು ದಿನದಿಂದ ದಿನಕ್ಕೆ ಭಾರತದ ಝೆನ್-ಜಿ ಹಾಗೂ ಝೆನ್-ಅಲ್ಫಾ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಕೊರಿಯನ್ ಗೇಮ್ ಆಡಬೇಡಿ ಎಂದು ತಂದೆ ಬೈದಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರ ಅಪಾರ್ಟ್ಮೆಂಟ್‌ನ 9ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯುಪಿಯ ಗಾಜಿಯಾಬಾದ್‌ನಲ್ಲಿ ನಡೆದಿರುವುದೇ ಇದಕ್ಕೆ ನಿದರ್ಶನ.

ಆತ್ಮಹತ್ಯೆಗೂ ಮುನ್ನ ಕ್ಷಮಿಸಿಬಿಡಿ ಅಪ್ಪ ಎಂದು ಬರೆದಿಟ್ಟಿರುವ ಪತ್ರ ಪತ್ತೆಯಾಗಿದೆ. ಗಾಜಿಯಾಬಾದ್‌ನ ಭಾರತ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ ಮಧ್ಯರಾತ್ರಿ 2.15ಕ್ಕೆ ಘಟನೆ ಸಂಭವಿಸಿದೆ. ಚೇತನ್‌ಕುಮಾರ್ ಅವರ ಮಕ್ಕಳಾದ ಪಾಖಿ (12), ಪ್ರಾಚಿ (14), ಮತ್ತು ವಿಶಿಖಾ (16) ಮೂವರು ಜಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಬಿದ್ದ ಶಬ್ದ ಕೇಳಿದಾಕ್ಷಣ ಎಚ್ಚರಗೊಂಡ ಪೋಷಕರು, ಸೆಕ್ಯೂರಿಟಿ ಗಾರ್ಡ್ಸ್ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ಅಸಿಸ್ಟಂಟ್ ಕಮಿಷನರ್ ಅತುಲ್ ಕುಮಾರ್ ಹೇಳಿದ್ದಾರೆ.

ಮೃತ ಸೋದರಿಯರು ಕೋವಿಡ್ ಸಮಯದಲ್ಲಿ ಕೊರಿಯನ್ ಗೇಮ್ಸ್ ವ್ಯಸನಿಗಳಾಗಿದ್ದರು. ಇದರಿಂದ ಶಾಲೆಯನ್ನೇ ತೊರೆದಿದ್ದರು. ಇತ್ತೀಚೆಗೆ ತಂದೆ ಗೇಮ್ ಆಡಲು ಮೊಬೈಲ್ ಕೊಡದಿದ್ದಕ್ಕೆ ಬೇಸರಗೊಂಡು ಕ್ಷಮಿಸು ಅಪ್ಪಾ, ಕೊರಿಯನ್ ಗೇಮ್‌ನಿಂದ ನಮ್ಮನ್ನು ದೂರಮಾಡಲು ಸಾಧ್ಯವಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಹಿರಿಯ ಅಕ್ಕ ವಿಶಿಖಾ ಮಹಡಿಯಿಂದ ಜಿಗಿಯುವುದನ್ನು ತಡೆಯಲು ಹೋಗಿ ಇನ್ನಿಬ್ಬರು ಬಾಲಕಿಯರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಷಕರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಕೊರಿಯನ್ ಗೇಮ್‌ನಿಂದ ನಮ್ಮನ್ನ ದೂರ ಮಾಡಲಾಗಲ್ಲ ಎಂದು ಬರೆದಿಟ್ಟು ಸೂಸೈಡ್: ಕೊವಿಡ್ ಟೈಮಲ್ಲಿ ಈ ಗೇಮ್ ಅಡಿಕ್ಷನ್ ಮಕ್ಕಳು ಬೆಳೆಸಿಕೊಂಡಿದ್ದರು. ಇತ್ತೀಚೆಗೆ ತಂದೆ ಗೇಮ್ ಆಡ ಬೇಡಿ ಎಂದಿದ್ದಕ್ಕೆ ಬೇಸರಗೊಂಡು `ಕ್ಷಮಿಸು ಅಪ್ಪಾ, ಈ ಗೇಮಿಂದ ನಮ್ಮನ್ನು ದೂರಮಾಡಲು ಸಾಧ್ಯವಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟು ಸಾವಿಗೀಡಾಗಿದ್ದಾರೆ.