Home Advertisement
Home ಸುದ್ದಿ ದೇಶ ಸಂಭ್ರಮದ ಮನೆಯಲ್ಲಿ ಸೂತಕ: ಮದುವೆಗೆ ಮೊದಲೆ ಸೋದರಿಯರ ಆತ್ಮಹತ್ಯೆ

ಸಂಭ್ರಮದ ಮನೆಯಲ್ಲಿ ಸೂತಕ: ಮದುವೆಗೆ ಮೊದಲೆ ಸೋದರಿಯರ ಆತ್ಮಹತ್ಯೆ

0
15

ಜೋಧಪುರ: ಸೋದರಿಯರಿಬ್ಬರ ಮದುವೆಯ ಸಂಭ್ರಮದಲ್ಲಿ ಸಂಬಂಧಿಕರಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಏಕಾಏಕಿ ಸೂತಕದ ಛಾಯೆ ಆವರಿಸಿದೆ.

ಹೊಸ ಬಾಳಿನ ಕನಸು ಹೊತ್ತು ಮದುವೆ ಆಗಿಬೇಕಿದ್ದ ಇಬ್ಬರು ಸೋದರಿಯರು. ಹಸೆಮಣೆ ಏರುವ ಮುನ್ನಾದಿನವೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಇದನ್ನೂ ಓದಿ: ನಕಲಿ‌ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಗೆ ನೆರವು: ಇಬ್ಬರು ಅರೆಸ್ಟ್

ರಾಜಸ್ಥಾನದ ಜೋಧ್‌ಪುರದ ಮನೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೀಪ್‌ ಸಿಂಗ್ ಎನ್ನುವವರ ಪುತ್ರಿಯರಾದ ಶೋಭಾ (25) ಮತ್ತು ವಿಮ್ಲಾ (23) ಮೃತ ಯುವತಿಯರು ಎಂದು ಗುರುತಿಸಲಾಗಿದೆ.

ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಇಬ್ಬರೂ ಸೋದರಿಯರ ವಿವಾಹವನ್ನು ಒಟ್ಟಿಗೆ ಮಾಡಲು ಹಿರಿಯರು ನಿಶ್ಚಿಯಿಸಿದ್ದರು. ಅದರಂತೆ ವಿವಾಹ ಮಹೋತ್ಸವಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು.

ಇದನ್ನೂ ಓದಿ: ಶಾಸಕರು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು…

ಶುಕ್ರವಾರ ತಡರಾತ್ರಿಯವರೆಗೂ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿದ್ದು, ಬಳಿಕ ಮಲಗಲು ಇಬ್ಬರು ತಮ್ಮ ಕೋಣೆಗೆ ಹೋಗಿದ್ದಾರೆ. ಆದರೆ ಬೆಳಗಿನ ಜಾವ ಇಬ್ಬರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿಯೇ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ.

ಇನ್ನು ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಮನೆಯಲ್ಲಿ ಒತ್ತಾಯಪೂರ್ವಕವಾಗಿ ಅವರಿಗೆ ಮದುವೆ ನಿಶ್ಚಯಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಪೊಲೀಸ್‌ ತನಿಖೆಯಿಂದ ಅವರ ಸಾವಿನ ಬಗ್ಗೆ ನಿಖರ ಕಾರಣ ಏನೆಂದು ತಿಳಿದು ಬರಬೇಕಿದೆ.

Previous articleನಕಲಿ‌ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಗೆ ನೆರವು: ಇಬ್ಬರು ಅರೆಸ್ಟ್