RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

0
48

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಿಸಿದೆ. ಅವರು ಮೂರು ವರ್ಷಗಳ ಅವಧಿಗೆ ಈ ಹುದ್ದೆಯನ್ನು ವಹಿಸಲಿದ್ದಾರೆ.

ಪ್ರಸ್ತುತ ಉಪಗವರ್ನರ್ ರಾಜೇಶ್ವರ್ ರಾವ್ ಅವರ ಅವಧಿ ಅಕ್ಟೋಬರ್ 8 ರಂದು ಮುಕ್ತಾಯವಾಗಲಿದ್ದು, ಅಕ್ಟೋಬರ್ 9ರಿಂದ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಅವರು ಆರ್‌ಬಿಐಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director) ಸೇವೆ ಸಲ್ಲಿಸುತ್ತಿದ್ದಾರೆ.

ಆರ್‌ಬಿಐಯಲ್ಲಿ ಒಟ್ಟು ನಾಲ್ಕು ಉಪಗವರ್ನರ್ ಹುದ್ದೆಗಳಿದ್ದು, ಪ್ರತಿಯೊಬ್ಬರೂ ಹಣಕಾಸು ನೀತಿ ರೂಪಿಸುವುದು, ಬ್ಯಾಂಕಿಂಗ್ ಕ್ಷೇತ್ರದ ಮೇಲ್ವಿಚಾರಣೆ ನಡೆಸುವುದು ಹಾಗೂ ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತಿರುತ್ತಾರೆ.

ಮುರ್ಮು ಅವರು ಯಾವ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂಬ ವಿವರವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ, ಹಣಕಾಸು ನೀತಿ ಹಾಗೂ ನಿಯಂತ್ರಣ ಕ್ಷೇತ್ರಗಳಲ್ಲಿ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರದ ಸಂಪುಟ ನೇಮಕಾತಿ ಸಮಿತಿ ಈ ನೇಮಕಾತಿಗೆ ಅನುಮೋದನೆ ನೀಡಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ. ಶಿರೀಶ್ ಚಂದ್ರ ಮುರ್ಮು ಅವರ ನೇಮಕಾತಿ ಹಿನ್ನೆಲೆ ಆರ್‌ಬಿಐಯ ಆಡಳಿತಾತ್ಮಕ ವ್ಯವಸ್ಥೆಗೆ ಹೊಸ ಚೈತನ್ಯ ತರುವ ನಿರೀಕ್ಷೆ ಮೂಡಿದೆ.

Previous articleಬೀದರ್: ಮಳೆ ಹಾನಿ, ವಿಶೇಷ ಪ್ಯಾಕೇಜ್‌ಗೆ ಸಿಎಂಗೆ ಮನವಿ
Next articleಬೆಂಗಳೂರು: ಜೆಸಿಬಿ ಘರ್ಜನೆ, 7.69 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು

LEAVE A REPLY

Please enter your comment!
Please enter your name here