ಹರಿಯಾಣ ಚುನಾವಣೆಯಲ್ಲಿ 25 ಲಕ್ಷ ಮತ ಕಳ್ಳತನ! — ಬ್ರೆಜಿಲ್ ಮಾಡೆಲ್ ಫೋಟೋ 22 ಬಾರಿ ಬಳಕೆ!

0
21

ನವದೆಹಲಿ: 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ಅಕ್ರಮ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನವಾಗಿವೆ. ಬಿಜೆಪಿ ನಕಲಿ ಮತಗಳ ಸಹಾಯದಿಂದ ಗೆದ್ದಿದೆ” ಎಂದು ಬಾಂಬ್ ಸಿಡಿಸಿದರು.

ರಾಹುಲ್ ಗಾಂಧಿ ಅವರ ಪ್ರಕಾರ, ಈ ಅಕ್ರಮ ಕೇವಲ ಕೆಲ ಕ್ಷೇತ್ರಗಳ ಮಟ್ಟದಲ್ಲೇ ಸೀಮಿತವಾಗಿರದೆ, ಇಡೀ ಹರಿಯಾಣ ಹಾಗೂ ಇತರ ರಾಜ್ಯಗಳಿಗೂ ವ್ಯಾಪಿಸಿದೆ. ಅವರು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿಯೂ ಇದೇ ರೀತಿಯ ದೂರುಗಳು ಬಂದಿವೆ ಎಂದು ಹೇಳಿದರು. “ಈಗ ನಾವು ಹರಿಯಾಣದ ಮತದಾನ ಅಕ್ರಮದ ಕುರಿತು ಕೇಂದ್ರೀಕರಿಸಿದ್ದೇವೆ,” ಎಂದರು.

ಕಾಂಗ್ರೆಸ್ ಮುಂಚಿತ ಸಮೀಕ್ಷೆಗಳಲ್ಲಿ ಮುನ್ನಡೆ – ಫಲಿತಾಂಶ ವಿಭಿನ್ನ: ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಪಕ್ಷವು 52 ರಿಂದ 62 ಸ್ಥಾನಗಳಷ್ಟು ಮುನ್ನಡೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಬಿಜೆಪಿ ಅಪ್ರತೀಕ್ಷಿತ ಜಯ ದಾಖಲಿಸಿತು. “ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳ ನಡುವಿನ ವ್ಯತ್ಯಾಸವೂ ಅಸಹಜವಾಗಿತ್ತು,” ಎಂದು ರಾಹುಲ್ ಗಾಂಧಿ ಹೇಳಿದರು.

ಅವರ ಪ್ರಕಾರ, ಕಾಂಗ್ರೆಸ್ ಕೇವಲ 22,779 ಮತಗಳಿಂದ ಸೋತರೂ, ಒಟ್ಟು 1.18 ಲಕ್ಷ ಮತಗಳ ವ್ಯತ್ಯಾಸ ದಾಖಲಾಗಿತ್ತು, ಇದು ಅನುಮಾನ ಹುಟ್ಟಿಸುವಂತಿದೆ. ಅವರು ನೀಡಿದ ಅಂಕಿ-ಅಂಶಗಳ ಪ್ರಕಾರ, 12.5% ಮತಗಳು ನಕಲಿ ಆಗಿದ್ದು, 93,000 ವಿಳಾಸಗಳು ಅಮಾನ್ಯವಾದವುಗಳು.

ಒಬ್ಬ ಮಹಿಳೆ 22 ಬಾರಿ ಮತ ಚಲಾಯಿಸಿದ ಘಟನೆ: ರಾಹುಲ್ ಗಾಂಧಿ ಉಲ್ಲೇಖಿಸಿದ ದಾಖಲೆ ಪ್ರಕಾರ, ಒಬ್ಬ ಮಹಿಳೆ ಸೀಮಾ, ಸ್ವೀಟಿ, ಸರಸ್ವತಿ ಮುಂತಾದ ಬೇರೆ ಬೇರೆ ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ್ದಾಳೆ. ಆಶ್ಚರ್ಯಕರವಾಗಿ, ಆಕೆಯ ನಕಲಿ ಫೋಟೋಗಳು ಬಳಸಿ 10 ಬೂತ್‌ಗಳಲ್ಲಿ ಮತದಾನ ನಡೆದಿದೆ. ನಂತರ ಆಕೆ ಬ್ರೆಜಿಲ್‌ನ ಮಾಡೆಲ್ ಎಂದು ಪತ್ತೆಯಾಗಿದೆ. “ಈ ಘಟನೆಯೇ ಹರಿಯಾಣದ ಮತ ಕಳ್ಳತನದ ನಿಖರ ಉದಾಹರಣೆ,” ಎಂದರು.

ಒಂದೇ ಗುರುತಿನಿಂದ ನೂರಾರು ಮತಗಳು: ಹರಿಯಾಣ ಚುನಾವಣೆಯ ಒಟ್ಟು 2 ಕೋಟಿ ಮತಗಳಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ, ಅಂದರೆ ಪ್ರತಿ 8 ಮತದಾರರಲ್ಲಿ ಒಬ್ಬರ ಮತ ನಕಲಿ. “ಒಂದೇ ಗುರುತಿನ ಚೀಟಿಯನ್ನು ನಕಲಿ ಚಿತ್ರಗಳೊಂದಿಗೆ ಅನೇಕ ಬಾರಿ ಬಳಸಲಾಗಿದೆ,” ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಕಾನೂನಾತ್ಮಕವಾಗಿ ಮುಂದುವರಿಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

Previous articleವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Next articleರಸ್ತೇಲಿ ಕಸ ಎಸೆದು ಕ್ಯಾಮೆರಾ ಮುಂದೆ ಯುವತಿಯರ ಡ್ಯಾನ್ಸ್: ಇಬ್ಬರಿಗೆ ದಂಡ

LEAVE A REPLY

Please enter your comment!
Please enter your name here