Home Advertisement
Home ಸುದ್ದಿ ದೇಶ ರೋಬೋ ‘ನೀಲಾ’ ಸ್ವಾಗತ: ಮತದಾನ ಪ್ರಮಾಣ ದಾಖಲೆ ಮಟ್ಟಕ್ಕೆ

ರೋಬೋ ‘ನೀಲಾ’ ಸ್ವಾಗತ: ಮತದಾನ ಪ್ರಮಾಣ ದಾಖಲೆ ಮಟ್ಟಕ್ಕೆ

0
82

ಪುದುಚೇರಿ : ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ತಾಂತ್ರಿಕ ಆವಿಷ್ಕಾರವೇ ವಿಶೇಷ ಆಕರ್ಷಣೆಯಾಗಿದ್ದು, ಮತಗಟ್ಟೆಗಳಲ್ಲಿ ‘ನೀಲಾ’ ಎಂಬ ಹ್ಯೂಮನಾಯ್ಡ್ ರೋಬೋಟ್ ಮತದಾರರನ್ನು ಸ್ವಾಗತಿಸಿದ ಘಟನೆ ಗಮನ ಸೆಳೆದಿದೆ. ಮತದಾನದ ದಿನದಂದು ಹಬ್ಬದ ವಾತಾವರಣ ನಿರ್ಮಿಸಲು ಮತ್ತು ವಿಶೇಷವಾಗಿ ಯುವ ಮತದಾರರನ್ನು ಆಕರ್ಷಿಸಲು ಈ ಹೊಸ ಪ್ರಯೋಗ ಕೈಗೊಳ್ಳಲಾಗಿದೆ.

ನೀಲಾ (Neela Robo) ಎಂಬ ಈ ರೋಬೋಟ್ ಅನ್ನು ‘ಮಿರರ್ ರೋಬೋ’ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಸಾಂಪ್ರದಾಯಿಕ ಸೀರೆ ಧರಿಸಿ ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ಹೂವುಗಳು ಮತ್ತು ಸಿಹಿತಿಂಡಿಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿತು.

ಬಹುಭಾಷಾ ರೋಬೋ – ಮತದಾರರ ಮೆಚ್ಚುಗೆ: ಈ ರೋಬೋಟ್ ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಿ, ಮತದಾರರಿಗೆ ಮಾಹಿತಿ ನೀಡುವ ಮೂಲಕ ಗಮನ ಸೆಳೆಯಿತು. ಅನೇಕರು ರೋಬೋಟ್ ಜೊತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತೊಡಗಿಕೊಂಡಿದ್ದು, ಇದು ಮತದಾನ ಕೇಂದ್ರಗಳಲ್ಲಿ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು. ಕೆಲವರು ಈ ಪ್ರಯೋಗವನ್ನು ಮೆಚ್ಚಿದರೆ, ಕೆಲವರು ಇದರ ವೆಚ್ಚದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಮತದಾನ ಪ್ರಮಾಣದಲ್ಲಿ ಭಾರೀ ಏರಿಕೆ : ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಬೆಳಿಗ್ಗೆ 11 ಗಂಟೆಗೆ: 37.06% ಮತದಾನ, ಮಧ್ಯಾಹ್ನ 1 ಗಂಟೆಗೆ: 56.86% ಮತದಾನ, ಮಧ್ಯಾಹ್ನ 3 ಗಂಟೆಗೆ: 72.4% ಮತದಾನವಾಗಿದೆ.

ಮತದಾನದ ಪ್ರಮಾಣ ವೇಗವಾಗಿ ಏರಿಕೆಯಾಗಿದ್ದು, ಇತರ ರಾಜ್ಯಗಳಿಗಿಂತ ಪುದುಚೇರಿ ಉತ್ತಮ ಪ್ರತಿಕ್ರಿಯೆ ತೋರಿದೆ.

ಪ್ರಮುಖ ರಾಜಕೀಯ ಮೈತ್ರಿಕೂಟಗಳು: ಈ ಚುನಾವಣೆಯಲ್ಲಿ ಮುಖ್ಯವಾಗಿ ಮೂರು ಪ್ರಮುಖ ಬಣಗಳು ಕಣದಲ್ಲಿವೆ. ಒಟ್ಟು 30 ಕ್ಷೇತ್ರಗಳಲ್ಲಿ 294 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಸುಮಾರು 9.44 ಲಕ್ಷ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸುತ್ತಿದ್ದಾರೆ.

ಮುಖ್ಯಮಂತ್ರಿ ಬೈಕ್‌ನಲ್ಲಿ ಬಂದು ಮತಚಲಾವನೆ: ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಬೈಕ್‌ನಲ್ಲಿ ಬಂದು ಮತ ಚಲಾಯಿಸಿದ್ದು ವಿಶೇಷ ಗಮನ ಸೆಳೆದಿದೆ.

ಫಲಿತಾಂಶ : ಇಂದು ನಡೆಯುತ್ತಿರುವ ಮತದಾನಾದ ಮತ ಎಣಿಕೆ ಮತ್ತು ಫಲಿತಾಂಶ ಮೇ 4, 2026 ಬರಲಿದೆ.

ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.