ಬಹುಕಾಲದ ಗೆಳತಿ ಜತೆ ಪ್ರಿಯಾಂಕಾ ವಾದ್ರಾ ಪುತ್ರ ನಿಶ್ಚಿತಾರ್ಥ

0
1

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ತಮ್ಮ ಬಹುಕಾಲದ ಪ್ರೇಯಸಿ ಅವೀವಾ ಬೇಗ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 25 ವರ್ಷದ ರೈಹಾನ್ ಮತ್ತು ಅವೀವಾ ಬೇಗ್ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ತಮ್ಮ ಪ್ರೇಮ ವಿಚಾರವನ್ನು ಕುಟಂಬದವರಿಗೆ ತಿಳಿಸಿದ್ದಾರೆ.

ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ದೆಹಲಿಯವರಾದ ಅವೀವಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ರೈಹಾನ್‌ನಂತೆಯೇ ಅವರೂ ಸಹ ಛಾಯಾಗ್ರಾಹಕಿ ಆಗಿದ್ದಾರೆ. ಈ ಕುರಿತು ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಾಲ್ಯದಿಂದಲೂ ರೈಹಾನ್ ಛಾಯಾಗ್ರಹಣದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೂ ಕೂಡ ಛಾಯಾಗ್ರಹಣ ಬಗ್ಗೆ ತುಂಬಾ ಒಲುವು ಇತ್ತು. ಸದ್ಯ ಪ್ರಿಯಾಂಕಾ ಭಾವಿ ಸೊಸೆ ಅವಿವಾ ಬೇಗ್ ಕೂಡ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಎನ್ನುವುದು ವಿಶೇಷವಾಗಿದೆ.

Previous articleರಾಜ್ಯ ಸರ್ಕಾರದಿಂದ ಶರವೇಗದಲ್ಲಿ ತುಷ್ಟೀಕರಣ