ನವದೆಹಲಿ: ಭಾರತೀಯ ಬಳಕೆದಾರರಿಗೆ ChatGPT ಸಂತಸದ ಸುದ್ದಿ ನೀಡಿದೆ. ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಒಪನ್‌ಎಐ (OpenAI) ಸಂಸ್ಥೆ ಮಂಗಳವಾರ ದೊಡ್ಡ ಘೋಷಣೆ ಮಾಡಿದ್ದು — ChatGPT Go ಮಾದರಿಯನ್ನು ಭಾರತದಲ್ಲಿ ಒಂದು ವರ್ಷ ಕಾಲ ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ಪ್ರಚಾರದ ಅವಧಿ ನವೆಂಬರ್ 4ರಿಂದ ಆರಂಭವಾಗಲಿದೆ.
OpenAI Dev Day Exchange – ಭಾರತದಲ್ಲಿ ಮೊದಲ ಬಾರಿಗೆ: ನವೆಂಬರ್ 4 ರಂದು ಬೆಂಗಳೂರು ನಗರದಲ್ಲಿ “OpenAI Dev Day Exchange” ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಭಾರತದ ಮೊದಲ ಅಧಿಕೃತ OpenAI ಕಾರ್ಯಕ್ರಮವಾಗಿದ್ದು, ಡೆವಲಪರ್‌ಗಳು, ವಿದ್ಯಾರ್ಥಿಗಳು ಮತ್ತು AI ಸಂಶೋಧಕರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ChatGPT Go ನ ವೈಶಿಷ್ಟ್ಯಗಳ ಕುರಿತು ನೇರ ಪ್ರದರ್ಶನ ನಡೆಯಲಿದೆ.
ಒಪನ್‌ಎಐ ಪ್ರಕಟಣೆಯ ಪ್ರಕಾರ, ಭಾರತವು ChatGPT ಬಳಕೆದಾರರ ದೃಷ್ಟಿಯಿಂದ ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಆದ್ದರಿಂದ ಭಾರತೀಯರಿಗೆ ಹೆಚ್ಚು ಉಪಯೋಗವಾಗುವಂತೆ ಹೊಸ ತಂತ್ರಜ್ಞಾನವನ್ನು ಉಚಿತವಾಗಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ChatGPT Go ಎಂದರೆ ಏನು?: ‘ChatGPT Go’ ಎಂದರೆ ChatGPTನ ಅತ್ಯಾಧುನಿಕ ಹಾಗೂ ವೇಗದ ಆವೃತ್ತಿ. ಇದರಲ್ಲಿ ಹೆಚ್ಚು questions per minute (ಹೆಚ್ಚು ಕೋರಿಕೆ ಮಿತಿ). ಹೆಚ್ಚು image generation (ಚಿತ್ರ ಸೃಷ್ಟಿ ಸಾಮರ್ಥ್ಯ). ಉತ್ತಮ memory & response quality. ಕಡಿಮೆ data usage ಮತ್ತು ವೇಗವಾದ ಪ್ರತಿಕ್ರಿಯೆ.ಇದು ಬಳಕೆದಾರರಿಗೆ ChatGPT Plus ನ ಸಮಾನ ಅನುಭವವನ್ನು ಉಚಿತವಾಗಿ ನೀಡಲಿದೆ.
ಉಚಿತವಾಗಿ ಪಡೆಯುವ ವಿಧಾನ (Step-by-Step): ನವೆಂಬರ್ 4 ರಿಂದ ChatGPT ಅಧಿಕೃತ ತಾಣಕ್ಕೆ ಭೇಟಿ ನೀಡಿ: https://chat.openai.com
ನಿಮ್ಮ OpenAI ಖಾತೆಯಲ್ಲಿ ಲಾಗಿನ್ (Login) ಅಥವಾ ಹೊಸ ಖಾತೆ ರಿಜಿಸ್ಟರ್ (Sign Up) ಮಾಡಿ.
“Try ChatGPT Go for Free” ಅಥವಾ “Activate Free Go Plan” ಎಂಬ ಆಯ್ಕೆ ಕಾಣುತ್ತದೆ.
ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆಗೆ 1 Year Free Access ಸಕ್ರಿಯವಾಗುತ್ತದೆ.
ಮೊಬೈಲ್ ಬಳಕೆದಾರರಿಗಾಗಿ, ChatGPT ಆಪ್ (Android / iOS) ನ “Settings → Plan → Upgrade to Go” ವಿಭಾಗದಲ್ಲಿ ಉಚಿತ ಆವೃತ್ತಿ ಸಕ್ರಿಯಗೊಳ್ಳುತ್ತದೆ.
ಈ ಉಚಿತ ಕೊಡುಗೆ ಸೀಮಿತ ಅವಧಿಗೆ ಲಭ್ಯವಾಗಿದ್ದು, ಮೊದಲ ನೋಂದಾಯಿತ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎಂದು OpenAI ತಿಳಿಸಿದೆ.
OpenAI ಉಪಾಧ್ಯಕ್ಷ ನಿಕ್ ಟುರ್ಲೆ ಅವರ ಈ ಕುರಿತಂತೆ ಭಾರತ ‘AI First’ ರಾಷ್ಟ್ರವಾಗುತ್ತಿದೆ. ChatGPT Go ಮೂಲಕ ಹೆಚ್ಚು ಮಂದಿ ಕೃತಕ ಬುದ್ಧಿಮತ್ತೆ ಉಪಯೋಗಿಸುವಂತಾಗಲಿ ಎಂಬ ಆಶಯದಿಂದ ‘India First Campaign’ ಆರಂಭಿಸಿದ್ದೇವೆ ಎಂದರು.
























czs0p3