Home ಸುದ್ದಿ ದೇಶ 45 ವರ್ಷಗಳ ಐತಿಹಾಸಿಕ ಜಯ: ಥ್ಯಾಂಕ್ಯೂ ತಿರುವನಂತಪುರ ಎಂದ ಮೋದಿ

45 ವರ್ಷಗಳ ಐತಿಹಾಸಿಕ ಜಯ: ಥ್ಯಾಂಕ್ಯೂ ತಿರುವನಂತಪುರ ಎಂದ ಮೋದಿ

0
1

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಕೂಟವು ಮಹಾನಗರ ಪಾಲಿಕೆಯ ಮೇಲೆ ಮೇಲುಗೈ ಸಾಧಿಸಿದೆ. ಇದರಿಂದಾಗಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮಿತ್ರಕೂಟದ 45 ವರ್ಷಗಳ ನಿರಂತರ ಆಳ್ವಿಕೆ ಕೊನೆಗೊಂಡಿದೆ.

ಕಾಂಗ್ರೆಸ್‌ನ ಪ್ರಭಾವಿ ನಾಯಕ ಶಶಿ ತರೂರ್ ಸಂಸದರಾಗಿರುವ ತಿರುವನಂತಪುರದಲ್ಲಿ ಬಿಜೆಪಿಯು ತನ್ನ ಪ್ರಭಾವವನ್ನು ನಿರಂತರವಾಗಿ ವಿಸ್ತರಿಸುತ್ತಿರುವುದು ಈ ಫಲಿತಾಂಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಹಾಕುವೆ

2026ರ ವಿಧಾನಸಭಾ ಚುನಾವಣೆಯಲ್ಲಿ ಈ ಫಲಿತಾಂಶ ಪ್ರಭಾವ ಬೀರಿದರೂ ಅಚ್ಚರಿ ಇಲ್ಲ. ತಿರುವನಂತಪುರ ಪಾಲಿಕೆಯ 101 ವಾರ್ಡ್‌ಗಳಲ್ಲಿ ಬಿಜೆಪಿ 50 ಸ್ಥಾನಗಳನ್ನು ಕಬಳಿಸಿದೆ.

ಥ್ಯಾಂಕ್ಯೂ ತಿರುವನಂತಪುರ: “ತಿರುವನಂತಪುರಕ್ಕೆ ಧನ್ಯವಾದ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ – ಎನ್‌ಡಿಎ ಪಡೆದ ಬಹುಮತ ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯರವರು ಗೆದ್ದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.