Home Advertisement
Home ಸುದ್ದಿ ದೇಶ LPG ಬಿಕ್ಕಟ್ಟು ಅಂತ್ಯ: ಅನಿಲ ಹೊತ್ತು ತಂದ ನಂದಾದೇವಿ-ಶಿವಾಲಿಕ್ ಹಡಗು

LPG ಬಿಕ್ಕಟ್ಟು ಅಂತ್ಯ: ಅನಿಲ ಹೊತ್ತು ತಂದ ನಂದಾದೇವಿ-ಶಿವಾಲಿಕ್ ಹಡಗು

0
90

ಕರ್ನಾಟಕಕ್ಕೆ 26,000 ಟನ್ LPG: ಮಂಗಳೂರು ಬಂದರಿಗೆ ಶಿವಾಲಿಕ್ ಹಡಗು

ನವದೆಹಲಿ/ಗುಜರಾತ್: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಕೊರತೆಗೆ ತಾತ್ಕಾಲಿಕ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ನಂದಾದೇವಿ ಎಂಬ ಭಾರೀ ಎಲ್‌ಪಿಜಿ ಟ್ಯಾಂಕರ್ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ (Kandla Port) ತಲುಪುವ ಹಂತದಲ್ಲಿದ್ದು, ದೇಶಕ್ಕೆ 46,000 ಟನ್ LPG ಪೂರೈಕೆ ಮಾಡಲಿದೆ.

ಇದಕ್ಕೂ ಮೊದಲು ಶಿವಾಲಿಕ್ ಹಡಗು ಕೂಡ 46,000 ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಆಗಮಿಸಿದ್ದು, ಎರಡು ಹಡಗುಗಳ ಒಟ್ಟು ಪೂರೈಕೆಯಿಂದ ಅನಿಲ ಕೊರತೆ ಕಡಿಮೆಯಾಗುವ ನಿರೀಕ್ಷೆಯಿದೆ.

ಕರ್ನಾಟಕಕ್ಕೂ ದೊಡ್ಡ ಪ್ರಮಾಣದ ಅನಿಲ: ಶಿವಾಲಿಕ್ ಹಡಗು ಈಗಾಗಲೇ ಗುಜರಾತ್‌ನ ಮುಂದ್ರಾ ಬಂದರಿಗೆ (Mundra Port) ತಲುಪಿ ಸುಮಾರು 20,000 ಟನ್ ಅನಿಲವನ್ನು ಇಳಿಸಿದೆ. ಉಳಿದ 26,000 ಟನ್ ಎಲ್‌ಪಿಜಿ ಅನ್ನು ಮಂಗಳೂರು ಬಂದರಗೆ (Mangalore Port) ತರಲಾಗುತ್ತಿದೆ.

ಈ ಅನಿಲವನ್ನು ಮಂಗಳೂರು ಸಮುದ್ರ ತೀರದಲ್ಲಿರುವ Single Point Mooring (SPM) ಸೌಲಭ್ಯ ಮೂಲಕ ಇಳಿಸಲಾಗುತ್ತಿದ್ದು, ನಂತರ ರಾಜ್ಯದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತದೆ.

ಕತಾರ್‌ನಿಂದ ಭಾರೀ ಸಾಗಣೆ : ನಂದಾದೇವಿ ಹಡಗು ಕತಾರ್‌ನಿಂದ ಅನಿಲವನ್ನು ಹೊತ್ತು ಹೊರಟಿದ್ದು, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಹೊರ್ಮುಜ್(Strait of Hormuz) ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತಕ್ಕೆ ಬರುತ್ತಿದೆ.

ಸಮುದ್ರ ಮಾರ್ಗದಲ್ಲಿ ಉಂಟಾಗಿರುವ ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು Indian Navy ಈ ಹಡಗುಗಳಿಗೆ ಭದ್ರತಾ ಬೆಂಗಾವಲು ಒದಗಿಸಿದೆ.

ಮೂರನೇ ಹಡಗು ಕೂಡ ನಿರೀಕ್ಷೆ: ಇದರ ಜೊತೆಗೆ ಮೂರನೇ ಹಡಗು ಕೂಡ ಇಂದು ಭಾರತ ತಲುಪುವ ಸಾಧ್ಯತೆ ಇದ್ದು, ಒಟ್ಟು ಅನಿಲ ಪೂರೈಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಕಚ್ಚಾ ತೈಲ ಟ್ಯಾಂಕರ್ ಆಗಮನ : ಇದೇ ವೇಳೆ, ಯುಎಇಯ ಫುಜೈರಾ ಬಂದರಿನಿಂದ ಹೊರಟ ಕಚ್ಚಾ ತೈಲ ಟ್ಯಾಂಕರ್ ‘ಜಗ್ ಲಡ್ಕಿ’ ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲ ಹೊತ್ತು ಮುಂದ್ರಾ ಬಂದರಿಗೆ (Mundra Port) ತಲುಪುವ ನಿರೀಕ್ಷೆಯಿದೆ.

ಅನಿಲ ಬಿಕ್ಕಟ್ಟು ತಗ್ಗುವ ನಿರೀಕ್ಷೆ: ಈ ಎಲ್ಲಾ ಹಡಗುಗಳ ಆಗಮನದಿಂದ ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದ್ದ LPG ಕೊರತೆ, ವಿಶೇಷವಾಗಿ ಕರ್ನಾಟಕದಲ್ಲಿನ ಸರಬರಾಜು ಸಮಸ್ಯೆ, ಮುಂದಿನ ದಿನಗಳಲ್ಲಿ ಕ್ರಮೇಣ ಸುಧಾರಿಸುವ ಸಾಧ್ಯತೆ ಇದೆ.