ಭಾರತದ ಮೊದಲ ಟೆಲಿ – ರೊಬೋಟಿಕ್ ಸರ್ಜರಿ ಪ್ರೋಗ್ರಾಂ ಆರಂಭ

0
1

ಮುಂಬೈ: ವೈದ್ಯಕೀಯ ಲೋಕದಲ್ಲಿ ಅಚ್ಚರಿ ಬೆಳವಣಿಗೆ ನಡೆದಿದೆ. ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯ (ಎಚ್‌ಎನ್‌ಆರ್‌ಎಫ್‌ಹೆಚ್) ಹಾಗೂ ಧೀರೂಭಾಯಿ ಅಂಬಾನಿ ಆಕ್ಯುಪೇಷನಲ್ ಹೆಲ್ತ್ (ಡಿಎಒಎಚ್) ಹಾಗೂ ಜಾಮ್ ನಗರದಲ್ಲಿನ ಸಮುದಾಯ ಕೇಂದ್ರದ ಸಹಯೋಗದಲ್ಲಿ ಟೆಲಿ – ರೊಬೋಟಿಕ್ ಸರ್ಜರಿ ಕಾರ್ಯಕ್ರಮ ಆರಂಭಿಸಿದೆ.

ಇದಕ್ಕೆ ಸಂಪೂರ್ಣ ಬಲ ಸಿಕ್ಕಿರುವುದು ರಿಲಯನ್ಸ್ ಜಿಯೋದಿಂದ. ಭಾರತದಲ್ಲಿನ ರಿಮೋಟ್ ಶಸ್ತ್ರಕ್ರಿಯೆ ಚಿಕಿತ್ಸೆಗೆ ಈ ಉಪಕ್ರಮ ಹೊಸ ಯುಗದಂತೆ ದಾಖಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಪರಿಣಿತ ಸರ್ಜನ್‌ಗಳು ಇನ್ನು ಮುಂದೆ ತಾವಿರುವ ಸ್ಥಳದಿಂದಲೇ ದೇಶದಾದ್ಯಂತ ಇರುವ ಸಹಯೋಗಿ ಆರೋಗ್ಯ ಸೇವೆ ಕೇಂದ್ರಗಳಲ್ಲಿ ರೊಬೋಟಿಕ್ ನೆರವಿನ ಸರ್ಜರಿಗಳನ್ನು ಮಾಡಬಹುದು ಹಾಗೂ ಮಾರ್ಗದರ್ಶನ ನೀಡಬಹುದು. ಮೆಟ್ರೋ – ಮೆಟ್ರೋಯೇತರ ಪ್ರದೇಶಗಳಲ್ಲಿ ಇರುವಂಥ ರೋಗಿಗಳಿಗೆ ಕೂಡ ಸ್ಪೆಷಲೈಸ್ಡ್, ತುಂಬ ಸೂಕ್ಷ್ಮವಾದ ಚಿಕಿತ್ಸೆಯನ್ನು ನೇರವಾಗಿ ತರಲಾಗಿದೆ.

ಉತ್ಕೃಷ್ಟ ದರ್ಜೆಯ ಚಿಕಿತ್ಸೆಗಳನ್ನು ಪಡೆಯುವುದಕ್ಕೆ ದೂರದ ಪ್ರದೇಶ ಎಂಬುದು ರೋಗಿಗಳ ಪಾಲಿಗೆ ದೊಡ್ಡ ತಡೆಯಾಗಿತ್ತು, ಈ ಕಾರ್ಯಕ್ರಮವು ಅದನ್ನು ತೊಡೆದುಹಾಕಿದೆ. ಪ್ರಯಾಣ ಮಾಡಬೇಕು ಎಂಬ ಅಗತ್ಯವಿಲ್ಲ ಹಾಗೂ ಸಮಯಕ್ಕೆ ಸರಿಯಾಗಿ ಪರಿಣತರ ಸಂಪರ್ಕ ಸಿಗುತ್ತದೆ. ಇದರಿಂದಾಗಿ ನಗರ – ಹಳ್ಳಿಪ್ರದೇಶದ ಆರೋಗ್ಯರಕ್ಷಣೆ ಅಂತರವನ್ನು ಮಹತ್ತರವಾಗಿ ಕಡಿಮೆ ಆಗುತ್ತದೆ. ಗುಜರಾತ್ ಜಾಮ್ ನಗರದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯುರಾಲಜಿ – ಅಂಕಾಲಜಿಯ ಆಸ್ಪತ್ರೆಯ ನಿರ್ದೇಶಕರ ನೇತೃತ್ವದಲ್ಲಿ ಮೊದಲ ಟೆಲಿ – ರೊಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಈ ಮೂಲಕ ಭಾರತದ ಟೆಲಿಮೆಡಿಸಿನ್ ಮತ್ತು ರೊಬೋಟಿಕ್ ಸರ್ಜರಿ ವಿಭಾಗದಲ್ಲಿ ಒಂದು ಹೊಸ ಮೈಲುಗಲ್ಲು ದಾಖಲಾಯಿತು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ನಂತರ ದೇಶ ಮತ್ತೊಮ್ಮೆ ಆತಂಕದಲ್ಲಿ

ಇದಕ್ಕಾಗಿ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಹಾಗೂ ಸುರಕ್ಷಿತ, ಅತ್ಯಂತ ವೇಗದ ಡಿಜಿಟಲ್ ಸಂಪರ್ಕವನ್ನು ಒದಗಿಸಿದ್ದು ರಿಲಯನ್ಸ್ ಜಿಯೋ. ಈ ಪ್ಲಾಟ್ ಫಾರ್ಮ್ ಅತ್ಯಂತ ನಿಖರ ಶಸ್ತ್ರಕ್ರಿಯೆ, ನಂಬಿಕಸ್ಥ ಹಾಗೂ ನೈಜ ಸಮಯದ ವೈದ್ಯಕೀಯ ಸಹಯೋಗವನ್ನು ಒದಗಿಸಿಕೊಟ್ಟಿತ್ತು. ಇನ್ನು ಬೆಂಬಲ ಕೊಟ್ಟಿದ್ದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಬಹುಶಿಸ್ತೀಯ ತಂಡ. ಈ ಕಾರಣಕ್ಕೆ ತಂತ್ರಜ್ಞಾನ ಸಹಯೋಗ ಹಾಗೂ ವೈದ್ಯಕೀಯ ತಂಡದ ಕೆಲಸವಾಗಿ ಇದೊಂದು ತಡೆಯಿಲ್ಲದ ಮಾದರಿಯಾಗಿ ಕಂಡಿದೆ. ಇದರೊಂದಿಗೆ ಜಾಮ್ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಲ್ಲಿಯೇ ಇರುವ ವೈದ್ಯಕೀಯ ತಂಡಕ್ಕೆ ನಿರಂತರ ಮಾರ್ಗದರ್ಶನ ನೀಡಲು ಹಾಗೂ ಸಾಮರ್ಥ್ಯ ನಿರ್ಮಾಣವನ್ನು ಮಾಡುವುದಕ್ಕೆ ಈ ಕಾರ್ಯಕ್ರಮ ಬಲ ನೀಡುತ್ತದೆ.

ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯ ಗ್ರೂಪ್ ಸಿಇಒ ಡಾ. ತರಂಗ್ ಗಿಯಾನ್ ಚಂದಾನಿ ಮಾತನಾಡಿ, ಉತ್ಕೃಷ್ಟ ಆರೋಗ್ಯಸೇವೆ ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತ ಆಗಬಾರದು. ಕೆಲವೇ ನಗರ ಕೇಂದ್ರಗಳಿಗೆ ಮಾತ್ರ ಸ್ಪೆಷಲೈಸ್ಡ್ ಶಸ್ತ್ರಕ್ರಿಯೆ ಚಿಕಿತ್ಸೆ ದಶಕಗಳಿಂದ ಕೇಂದ್ರೀಕೃತವಾಗಿದೆ. ಹತ್ತಾರು ಲಕ್ಷ ಜನಕ್ಕೆ ಸಮಯಕ್ಕೆ ಸಿಗಬೇಕಾದ ಚಿಕಿತ್ಸೆ ದೊರೆಯುತ್ತಿಲ್ಲ. ಟೆಲಿ ರೊಬೋಟಿಕ್ ಸರ್ಜರಿ ಮೂಲಕವಾಗಿ ನಾವು ಸಂಕೀರ್ಣ ಶಸ್ತ್ರಕ್ರಿಯೆ ಚಿಕಿತ್ಸೆಯನ್ನು ಭಾರತದಾದ್ಯಂತ ಮಾಡಬಹುದು. ಅದಕ್ಕೆ ದೇಶೀಯ ನಾವೀನ್ಯತೆ, ಉತ್ಕೃಷ್ಟ ರೊಬೋಟಿಕ್ಸ್, ಸುರಕ್ಷಿತವಾದ ಡಿಜಿಟಲ್ ಮೂಲಸೌಕರ್ಯ ಇದೆ. ಮುಂಬೈನಲ್ಲಿ ಇರುವ ನಮ್ಮ ಸರ್ಜನ್‌ಗಳು ದೇಶದಲ್ಲಿ ಎಲ್ಲೇ ಇರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯ ಎಂದರು.

ಇದನ್ನೂ ಓದಿ: ಖ್ಯಾತ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ನಿಧನ

ಜಿಯೋ ಪ್ಲಾಟ್ ಫಾರ್ಮ್ಸ್ ಸಿಒಒ ಅನಿಶ್ ಶಾ ಮಾತನಾಡಿ, ಟೆಲಿ ರೊಬೋಟಿಕ್ ಸರ್ಜರಿ ಪ್ರೋಗ್ರಾಮ್ ಜಾಮ್ ನಗರದಲ್ಲಿನ ದೂರದ ಪ್ರದೇಶದಲ್ಲಿ ಮಾಡಲು ಸಾಧ್ಯವಾಯಿತು ಎಂಬುದು ಜಿಯೋದ ಡಿಜಿಟಲ್ ಮೂಲಸೌಕರ್ಯವು ರಾಷ್ಟ್ರವ್ಯಾಪಿ ಹೇಗೆ ಅಗತ್ಯ ಸೇವೆಗಳಲ್ಲಿ ಪರಿವರ್ತನೆ ತರಬಹುದು ಎಂಬುದಕ್ಕೆ ಶಕ್ತಿಶಾಲಿ ಪ್ರದರ್ಶನ ಆಗಿದೆ. ಈ ಸಹಯೋಗವು ಮುಂದಿನ ತಲೆಮಾರಿನ ಡಿಜಿಟಲ್ ನೆಟ್‌ವರ್ಕ್ಸ್ ವೈದ್ಯಕೀಯ ಲೋಕದ ಏನೆಲ್ಲ ಸಾಧ್ಯತೆಯನ್ನು ತೆರೆದಿರುತ್ತದೆ ಎಂಬುದನ್ನು ತೋರಿಸಿದೆ ಎಂದರು.

Previous articleತುರ್ತು ಪರಿಸ್ಥಿತಿಯ ನಂತರ ದೇಶ ಮತ್ತೊಮ್ಮೆ ಆತಂಕದಲ್ಲಿ