Home Advertisement
Home ಸುದ್ದಿ ದೇಶ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ:ತಿರುವನಂತಪುರಂನಲ್ಲಿ NDA ಅಚ್ಚರಿ ಸಾಧನೆ – UDFಗೆ ಭರ್ಜರಿ ಜಯ, LDFಗೆ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ:ತಿರುವನಂತಪುರಂನಲ್ಲಿ NDA ಅಚ್ಚರಿ ಸಾಧನೆ – UDFಗೆ ಭರ್ಜರಿ ಜಯ, LDFಗೆ ಹಿನ್ನಡೆ

0
61

ತಿರುವನಂತಪುರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ತಿರುವನಂತಪುರಂ: 2025ರ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಆಡಳಿತಾರೂಢ ಎಡಪಕ್ಷಗಳ ಮೈತ್ರಿ ಎಲ್‌ಡಿಎಫ್ (LDF) ಹಲವು ಕಡೆಗಳಲ್ಲಿ ಹಿನ್ನಡೆಯನ್ನು ಎದುರಿಸಿದ್ದು, ಎನ್‌ಡಿಎ (NDA) ಕೆಲವು ಪ್ರಮುಖ ನಗರ ಪ್ರದೇಶಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ತಿರುವನಂತಪುರಂ ಪಾಲಿಕೆಯಲ್ಲಿ NDA ಬಲ ಪ್ರದರ್ಶನ: ಈ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲಾಭವೆಂದರೆ, 101 ಸದಸ್ಯರ ತಿರುವನಂತಪುರಂ ನಗರ ಪಾಲಿಕೆಯಲ್ಲಿ NDA 50 ಸ್ಥಾನಗಳನ್ನು ಭದ್ರಪಡಿಸಿಕೊಂಡಿರುವುದು. ಇದು ಕೇರಳ ರಾಜಕೀಯದಲ್ಲಿ NDAಗೆ ಹೊಸ ಆತ್ಮವಿಶ್ವಾಸವನ್ನು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕೇರಳದ ಜನರು UDF ಮತ್ತು LDF ಎರಡರಿಂದಲೂ ಬೇಸತ್ತಿದ್ದಾರೆ. ಉತ್ತಮ ಆಡಳಿತ ಮತ್ತು ಎಲ್ಲರಿಗೂ ಅವಕಾಶಗಳನ್ನು ನೀಡುವ ವಿಕಸಿತ ಕೇರಳ ನಿರ್ಮಾಣಕ್ಕೆ NDAಯನ್ನೇ ಏಕೈಕ ಪರ್ಯಾಯವೆಂದು ಅವರು ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಸ್ಸಿ GOAT ಇಂಡಿಯಾ ಟೂರ್ ಸಂಭ್ರಮದ ನಡುವೆ ಅಭಿಮಾನಿಗಳಿಂದ ಆಕ್ರೋಶ

ಪಾಲಿಕೆಗಳ ಫಲಿತಾಂಶ – UDF ಮೇಲುಗೈ: ರಾಜ್ಯದ ಆರು ಪ್ರಮುಖ ಪಾಲಿಕೆಗಳ ಪೈಕಿ ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಸೇರಿ ನಾಲ್ಕು ಪಾಲಿಕೆಗಳಲ್ಲಿ UDF ಗೆಲುವು ಸಾಧಿಸಿದೆ. ಕೋಝಿಕ್ಕೋಡ್ ಪಾಲಿಕೆಯನ್ನು LDF ಉಳಿಸಿಕೊಂಡಿದೆ. ಇನ್ನು, ತಿರುವನಂತಪುರಂ ಪಾಲಿಕೆಯನ್ನು NDA LDFನಿಂದ ಕಿತ್ತುಕೊಂಡಿದ್ದು, ಇದು ಈ ಚುನಾವಣೆಯ ದೊಡ್ಡ ಅಚ್ಚರಿಯ ಫಲಿತಾಂಶಗಳಲ್ಲಿ ಒಂದಾಗಿದೆ.

ಪಂಚಾಯತ್ ಮಟ್ಟದಲ್ಲಿ UDF ಮುನ್ನಡೆ: ಸ್ಥಳೀಯ ಆಡಳಿತದ ತಳಮಟ್ಟದಲ್ಲಿಯೂ UDF ಸ್ಪಷ್ಟ ಮುನ್ನಡೆ ಸಾಧಿಸಿದೆ. 59 ಜಿಲ್ಲಾ ಪಂಚಾಯತ್‌ಗಳು, 1,063 ಬ್ಲಾಕ್ ಪಂಚಾಯತ್‌ಗಳು, 7,451 ಗ್ರಾಮ ಪಂಚಾಯತ್‌ಗಳಲ್ಲಿ UDF ಜಯಗಳಿಸಿದೆ. ಇದಕ್ಕೆ ವಿರುದ್ಧವಾಗಿ, LDF 30 ಜಿಲ್ಲಾ ಪಂಚಾಯತ್‌ಗಳು, 823 ಬ್ಲಾಕ್ ಪಂಚಾಯತ್‌ಗಳು, 6,137 ಗ್ರಾಮ ಪಂಚಾಯತ್‌ಗಳನ್ನು ಗೆದ್ದುಕೊಂಡಿದೆ.

ಎನ್‌ಡಿಎಗೆ ಈ ಚುನಾವಣೆಯಲ್ಲಿ ಸೀಮಿತ ಯಶಸ್ಸು ದೊರೆತಿದ್ದು, ಒಂದು ಜಿಲ್ಲಾ ಪಂಚಾಯಿತಿ, 50 ಬ್ಲಾಕ್ ಪಂಚಾಯತ್‌ಗಳು, 1,363 ಗ್ರಾಮ ಪಂಚಾಯತ್‌ಗಳನ್ನು ಗೆದ್ದುಕೊಂಡಿದೆ.

ಸರ್ಕಾರದ ವಿರುದ್ಧ ಜನರ ಸಂದೇಶ: UDF ನ ಭರ್ಜರಿ ಗೆಲುವಿಗೆ ಪ್ರತಿಕ್ರಿಯಿಸಿದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಇದು ರಾಜ್ಯ ಸರ್ಕಾರದ ವಿರುದ್ಧ ಜನರು ನೀಡಿರುವ ಎಚ್ಚರಿಕೆ ಹಾಗೂ ದುರಾಡಳಿತದ ವಿರುದ್ಧದ ಸ್ಪಷ್ಟ ಪ್ರತಿಭಟನೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, “ಈ ಫಲಿತಾಂಶಗಳು ಎಲ್‌ಡಿಎಫ್ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೆಲ ಕ್ರಿಕೆಟಿಗರ ದುಶ್ಚಟಗಳ ಕುರಿತು ರಿವಾಬಾ ಜಡೇಜಾ ಹೇಳಿಕೆ: ಭಾರೀ ಚರ್ಚೆ, ವಿವಾದ

ಇನ್ನು, LDF ಸಂಚಾಲಕ ಟಿ.ಪಿ. ರಾಮಕೃಷ್ಣನ್“ಫಲಿತಾಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗುವುದು. ಇಂತಹ ಫಲಿತಾಂಶಕ್ಕೆ ಕಾರಣವಾದ ಅಂಶಗಳನ್ನು ಜನರ ಅಭಿಪ್ರಾಯದ ಆಧಾರದಲ್ಲಿ ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Previous articleವೈಜ್ಞಾನಿಕ ಮನೋಭಾವವೇ ವಿಜ್ಞಾನದ ಗುರಿ: ಸಿ ಎಂ ಸಿದ್ದರಾಮಯ್ಯ
Next articleಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ: ಜ್ಞಾನಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ