ಹಸಿರು ಹೈಡ್ರೋಜನ್ ಚಾಲಿತ ಕಾರಿನಲ್ಲಿ ಜೋಶಿ – ಗಡ್ಕರಿ ಪ್ರಯಾಣ

0
4

ನವದೆಹಲಿ: ಹಸಿರು ಹೈಡ್ರೋಜನ್ ಮತ್ತು ಶುದ್ಧ ಇಂಧನ ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಪ್ರತೀಕವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಟೊಯೋಟಾ ಮಿರಾಯ್ ಇಂಧನ ಕೋಶ ವಿದ್ಯುತ್ ವಾಹನ (ಎಫ್‌ಸಿಇವಿ)ದಲ್ಲಿ ಪ್ರಯಾಣಿಸಿ ಗಮನ ಸೆಳೆದರು.

ಸಚಿವ ಪ್ರಲ್ಹಾದ್‌ ಜೋಶಿ ಅವರು ದೆಹಲಿಯ ಭಾರತ್ ಮಂಟಪದಿಂದ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಮಿರೈ ಹಸಿರು ಇಂಧನ ಚಾಲಿತ ಕಾರನ್ನು ಸ್ವತಃ ಚಾಲನೆ ಮಾಡಿದರು.

ಇದನ್ನೂ ಓದಿ: ಮೋದಿಯನ್ನೂ ಟ್ರಂಪ್ ಅಪಹರಿಸುತ್ತಾರಾ? ಚೌಹಾಣ್ ವಿವಾದ

ಟೊಯೋಟಾ ಮಿರೈ ವಿಶೇಷತೆ: ಎರಡನೇ ತಲೆಮಾರಿನ ಹೈಡ್ರೋಜನ್ ಇಂಧನ ಕೋಶ ವಿದ್ಯುತ್ ವಾಹನವಾದ ಟೊಯೋಟಾ `ಮಿರಾಯ್’, ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಉಪ-ಉತ್ಪನ್ನವಾಗಿ ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ. ಸರಿಸುಮಾರು 650 ಕಿ.ಮೀ. ಚಾಲನಾ ವ್ಯಾಪ್ತಿ ಮತ್ತು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇಂಧನ ತುಂಬುವ ಸಾಮರ್ಥ್ಯ ಹೊಂದಿದೆ. ಇದು ವಿಶ್ವದ ಅತ್ಯಂತ ಮುಂದುವರಿದ ಪರಿಸರಸ್ನೇಹಿ ವಾಹನಗಳಲ್ಲಿ ಒಂದಾಗಿದೆ.

Previous articleಗೃಹಲಕ್ಷ್ಮೀ ಹಣದಲ್ಲಿ ಧ್ವಜಸ್ತಂಭ ನಿರ್ಮಾಣ