PSLV-C62 ಉಡಾವಣೆ: PS3ಯ ಕೊನೆಯ ಹಂತದಲ್ಲಿ ಅಡಚಣೆ – ISRO ದಿಂದ ತಾಂತ್ರಿಕ ವಿಶ್ಲೇಷಣೆ ಪ್ರಾರಂಭ

0
40

DRDO ಅಭಿವೃದ್ಧಿಪಡಿಸಿದ ‘ಅನ್ವೇಷಾ’ ಹೈಪರ್‌ಸ್ಪೆಕ್ಟ್ರಲ್ ಉಪಗ್ರಹ ಸೇರಿ 14 ಪೇಲೋಡ್‌ಗಳು ಹೊತ್ತು ಸಾಗಿದ್ದ PSLV-C62

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2026ನೇ ವರ್ಷದ ಮೊದಲ ಭಾಗವಾಗಿ ಜನವರಿ 12ರಂದು ಬೆಳಿಗ್ಗೆ 10.17ಕ್ಕೆ PSLV-C62 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಿತು ಭೂ ವೀಕ್ಷಣಾ ಉಪಗ್ರಹ EOS-N1 ಸೇರಿದಂತೆ ಒಟ್ಟು 14 ಪೇಲೋಡ್‌ಗಳನ್ನು ಹೊತ್ತು ಸಾಗಿತ್ತು ಆದರೆ ಪಿಎಸ್3 (ಮೂರನೇ ಹಂತ) ಯ ಕೊನೆಯ ಭಾಗದಲ್ಲಿ ಅಡಚಣೆ ಉಂಟಾಯಿತು. ಈ ಕುರಿತಂತೆ ISRO ದಿಂದ ತಾಂತ್ರಿಕ ವಿಶ್ಲೇಷಣೆ ಪ್ರಾರಂಭಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಈ ಉಡಾವಣೆ ನಡೆದಿದೆ. ಇದು 2026ರಲ್ಲಿ ಇಸ್ರೋ ನಡೆಸಿದ ಮೊದಲ ಬಾಹ್ಯಾಕಾಶ ಉಡಾವಣೆಯಾಗಿತ್ತು.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಭಾರತ–ವಿದೇಶಗಳ ಉಪಗ್ರಹಗಳಿಗೆ ವೇದಿಕೆಯಾದ PSLV-C62: PSLV-C62 ಮಿಷನ್ ಮೂಲಕ ಭಾರತ ಹಾಗೂ ವಿವಿಧ ದೇಶಗಳಿಗೆ ಸೇರಿದ ಒಟ್ಟು 14 ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯಲಾಗಿತ್ತು. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಈ ಉಪಗ್ರಹ ಯೋಜನೆಯ ಸಂಯೋಜನೆ ಮತ್ತು ವಾಣಿಜ್ಯ ನಿರ್ವಹಣೆ ಮಾಡುವುದಾಗಿ ತಿಳಿಸಿತ್ತು. ಇವುಗಳಲ್ಲಿ ಭೂ ವೀಕ್ಷಣೆ, ತಂತ್ರಜ್ಞಾನ ಪ್ರದರ್ಶನ, ಸಂಶೋಧನೆ ಹಾಗೂ ಭದ್ರತಾ ಉದ್ದೇಶದ ಉಪಗ್ರಹಗಳು ಸೇರಿದ್ದವು.

ಇದನ್ನೂ ಓದಿ:  ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ

ಕೊನೆಕ್ಷಣದ ಅಡ್ಡಿ: ಉಡಾವಣೆಯ ಸಮಯದಲ್ಲಿ, ಪಿಎಸ್3 (ಮೂರನೇ ಹಂತ) ಯ ಕೊನೆಯ ಭಾಗದಲ್ಲಿ ಅಸಮರ್ಪಕತೆ (anomaly) ಸಂಭವಿಸಿದೆ. ಇದರಿಂದಾಗಿ ರಾಕೆಟ್‌ನ ಹಾರಾಟದ ಮಾರ್ಗದಲ್ಲಿ ವಿಚಲನ (deviation) ಉಂಟಾಯಿತು. ISRO ಈ ಕುರಿತಂತೆ ತಕ್ಷಣವೇ ವಿವರವಾದ ವಿಶ್ಲೇಷಣೆಯನ್ನು ಪ್ರಾರಂಭಿಸಿದೆ ಎಂದು ತನ್ನ ಅಧಿಕೃತ ಖಾತೆಯಲ್ಲಿ ತಿಳಿಸಿದೆ. ಪಿಎಸ್3 ಹಂತವು ಘನ ಇಂಧನದ್ದಾಗಿದ್ದು, ಇದು ರಾಕೆಟ್‌ನ್ನು ಮೇಲ್ಮಟ್ಟಕ್ಕೆ ತಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಟೆಲಿಮೆಟ್ರಿ ಡೇಟಾ (ದೂರಸಂವೇದಿ ಮಾಹಿತಿ) ಯನ್ನು ಪರಿಶೀಲಿಸಿ, ಸಮಸ್ಯೆಯ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ:  ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು

ಈ ಮೊದಲು ಆಗಿತ್ತು: 2025ರಲ್ಲಿ ಪಿಎಸ್‌ಎಲ್‌ವಿ ಮಿಷನ್‌ನಲ್ಲಿ ಇದೇ ರೀತಿಯ ಅಸಮರ್ಪಕತೆ ಸಂಭವಿಸಿತ್ತು. ಆದರೆ ಅದರ ನಂತರ ಕಟ್ಟುನಿಟ್ಟಾದ ಗುಣಮಟ್ಟ ಪರೀಕ್ಷೆಗಳನ್ನು ಮಾಡಿ, ಈ ಮಿಷನ್‌ನ್ನು “ರಿಟರ್ನ್-ಟು-ಫ್ಲೈಟ್” (ಮರಳಿ ಹಾರಾಟ) ಎಂದು ಪರಿಗಣಿಸಲಾಗಿತ್ತು. ಆದರೂ ಈ ಬಾರಿ ಮತ್ತೆ ಸಮಸ್ಯೆ ಉಂಟಾಗಿದ್ದು, ISROಗೆ ಸವಾಲಾಗಿದೆ. ಒತ್ತಡದ ನಿಯಂತ್ರಣಗಳು ಸ್ಥಿರವಾಗಿದ್ದರೂ, ಮೂರನೇ ಹಂತದ ಕೊನೆಯಲ್ಲಿ ತೊಂದರೆಯಾಗಿದೆ. ISRO ತನ್ನ ವಿಶ್ವಾಸಾರ್ಹತೆಗೆ ಹೆಸರಾಗಿದ್ದು, ಇಂತಹ ಅಡಚಣೆಗಳನ್ನು ಮೀರಿ ಕಲಿತು ಮುಂದುವರಿಯುತ್ತದೆ.

Previous articleಆಳ್ವಾಸ್‌ನಲ್ಲಿ 85ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್
Next article‘ಕರಿಕಾಡ’ನ ಸಾಹಸ–ಪ್ರೇಮದ ದೃಶ್ಯಕಾವ್ಯಕ್ಕೆ ‘ರತುನಿʼ ಸೇರ್ಪಡೆ