Home Advertisement
Home ಸುದ್ದಿ ದೇಶ ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: INS Anjadip ನಿಯೋಜನೆ

ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: INS Anjadip ನಿಯೋಜನೆ

0
99

ಕರಾವಳಿ ಭದ್ರತೆಗೆ ಹೊಸ ಕವಚ: ಭಾರತೀಯ ನೌಕಾಪಡೆಯ ತಂತ್ರಜ್ಞಾನ ಮುನ್ನಡೆ80% ಸ್ಥಳೀಯ ನಿರ್ಮಾಣದ ನೌಕೆ ಸೇರ್ಪಡೆಆತ್ಮನಿರ್ಭರ ಭಾರತಕ್ಕೆ ಬಲ

ಚೆನ್ನೈ: ಕಡಲ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ Indian Navy ಇಂದು (ಫೆಬ್ರವರಿ 27) ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ INS Anjadip ಅನ್ನು ಅಧಿಕೃತವಾಗಿ ನೌಕಾಪಡೆಗೆ ಚೆನ್ನೈ ಬಂದರಿನಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ಈ ಯುದ್ಧನೌಕೆ ಆಳವಿಲ್ಲದ ಕರಾವಳಿ ನೀರಿನಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಹಲ್-ಮೌಂಟೆಡ್ ಸೋನಾರ್, ಕಡಿಮೆ ಆವರ್ತನದ ವೇರಿಯಬಲ್ ಆಳ ಸೋನಾರ್, ಹಗುರ ಟಾರ್ಪಿಡೊಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್ ಮತ್ತು 30 ಮಿಮೀ ನೌಕಾ ಬಂದೂಕು ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರ-ಸಂವೇದಕಗಳನ್ನು ಹೊಂದಿದೆ.

ಇದನ್ನೂ ಓದಿ: ರಾಜಕೀಯ ಕಾದಾಟ ತೀವ್ರ: ಮಾಜಿ CM ಪನ್ನೀರ ಸೆಲ್ವಂ DMK ಸೇರ್ಪಡೆ

ಸುಮಾರು 77 ಮೀಟರ್ ಉದ್ದದ ಈ ಹಡಗು ಗಂಟೆಗೆ 25 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು. 3,300 ಕಿ.ಮೀ. ವ್ಯಾಪ್ತಿಯ ಕಾರ್ಯಾಚರಣಾ ಸಾಮರ್ಥ್ಯ ಹೊಂದಿದ್ದು, ತೀರದಿಂದ 100–150 ನಾಟಿಕಲ್ ಮೈಲುಗಳವರೆಗೆ ಶತ್ರು ಜಲಾಂತರ್ಗಾಮಿ ಚಟುವಟಿಕೆಗಳನ್ನು ಪತ್ತೆಹಚ್ಚಬಲ್ಲದು.

ಅಂಜದೀಪ್ ಹೆಸರಿನ ಮಹತ್ವ: ಕರ್ನಾಟಕದ ಕಾರವಾರದ ಕರಾವಳಿಯಲ್ಲಿರುವ ಅಂಜದೀಪ್ ದ್ವೀಪದ ಹೆಸರನ್ನು ಈ ನೌಕೆಗೆ ಇಡಲಾಗಿದೆ. ಇದು ಈ ಹಿಂದೆ ಸೇವೆಯಲ್ಲಿದ್ದ ಹಳೆಯ ‘ಅಂಜದೀಪ್’ ನೌಕೆಯ ಹೊಸ ಆವೃತ್ತಿಯಾಗಿದೆ.

ಇದನ್ನೂ ಓದಿ: ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್

ಈ ಹಡಗನ್ನು Garden Reach Shipbuilders & Engineers (GRSE) ನಿರ್ಮಿಸಿದ್ದು, ಸುಮಾರು 80% ಸ್ಥಳೀಯ ವಸ್ತುಗಳನ್ನು ಬಳಸಲಾಗಿದೆ. ಇದು ‘ಆತ್ಮನಿರ್ಭರ ಭಾರತ’ ದೃಷ್ಟಿಕೋನದಡಿ ರಕ್ಷಣಾ ಕ್ಷೇತ್ರದ ಸ್ವಾವಲಂಬನೆಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಜಲಾಂತರ್ಗಾಮಿ ವಿರೋಧಿ ಶ್ಯಾಲೋ ವಾಟರ್ ಕ್ರಾಫ್ಟ್ ಯೋಜನೆಯಡಿ ಒಟ್ಟು 16 ಹಡಗುಗಳನ್ನು ನಿರ್ಮಿಸಲಾಗುತ್ತಿದೆ.

Previous articleರಾಜಕೀಯ ಕಾದಾಟ ತೀವ್ರ: ಮಾಜಿ CM ಪನ್ನೀರ ಸೆಲ್ವಂ DMK ಸೇರ್ಪಡೆ
Next article₹9.34 ಬಾಕಿಗೆ ಬ್ಯಾಂಕ್ ಕರೆ: 66 ಪೈಸೆ ವಾಪಸ್ ಕೇಳಿದ ರೈತ