ZAPAD 2025: ಸೇನಾ ಅಭ್ಯಾಸಕ್ಕಾಗಿ ರಷ್ಯಾಕ್ಕೆ ಭಾರತೀಯ ಸೇನೆ

0
57

ನವದೆಹಲಿ: ರಷ್ಯಾದ ನಿಝ್ನಿ ಪ್ರದೇಶದ ಮುಲಿನೊ ತರಬೇತಿ ಮೈದಾನದಲ್ಲಿ ನಡೆಯಲಿರುವ ಬಹುರಾಷ್ಟ್ರೀಯ ಸಂಯುಕ್ತ ಸೇನಾ ಅಭ್ಯಾಸ ZAPAD 2025ರಲ್ಲಿ ಭಾಗವಹಿಸಲು ಭಾರತೀಯ ಸಶಸ್ತ್ರ ಪಡೆಗಳ ದಳವು ಇಂದು ರವಾನೆಯಾಯಿತು. ಸೆಪ್ಟೆಂಬರ್ 10 ರಿಂದ 16 ರವರೆಗೆ ಈ ಅಭ್ಯಾಸ ನಡೆಯಲಿದೆ.

ಭಾರತದಿಂದ ಒಟ್ಟು 65 ಮಂದಿ ಸೈನಿಕರು ಈ ಸೇನಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ 57 ಮಂದಿ ಭಾರತೀಯ ಸೇನೆ, 7 ಮಂದಿ ವಾಯುಪಡೆ ಹಾಗೂ 1 ನೌಕಾಪಡೆಯ ಸಿಬ್ಬಂದಿ ಇದ್ದಾರೆ. ಭಾರತೀಯ ಸೇನೆ ಪರವಾಗಿ ಕುಮಾವೋನ್ ರೆಜಿಮೆಂಟ್‌ನ ಒಂದು ಪಡೆ ಮುನ್ನಡೆಸುತ್ತಿದ್ದು, ಸೇನೆಯ ಇತರೆ ಶಾಖೆಗಳ ಸಿಬ್ಬಂದಿಯೂ ಸೇರಿದ್ದಾರೆ.

ZAPAD 2025 ಸೇನಾ ಅಭ್ಯಾಸವು ಬಹು ರಾಷ್ಟ್ರಗಳ ಸೈನ್ಯಗಳ ನಡುವೆ ಸಹಕಾರವನ್ನು ಬಲಪಡಿಸುವುದು, ಪರಸ್ಪರ ಕಾರ್ಯಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಪರಂಪರೆಯ ಯುದ್ಧ ತಂತ್ರಗಳು ಹಾಗೂ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳ ಕ್ಷೇತ್ರದಲ್ಲಿ ತಂತ್ರಜ್ಞಾನ, ತರಬೇತಿ, ಅನುಭವ ಹಂಚಿಕೊಳ್ಳಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ರಷ್ಯಾ ಆತಿಥ್ಯ ವಹಿಸಿರುವ ಈ ಸೇನಾ ಅಭ್ಯಾಸದಲ್ಲಿ ಹಲವು ರಾಷ್ಟ್ರಗಳ ಸೈನ್ಯಗಳು ಪಾಲ್ಗೊಳ್ಳುತ್ತಿದ್ದು, ಜಾಗತಿಕ ಭದ್ರತೆ ಹಾಗೂ ಪ್ರಾದೇಶಿಕ ಶಾಂತಿ ಕಾಪಾಡುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿ ಪರಿಣಮಿಸಲಿದೆ ಎಂದು ರಕ್ಷಣಾ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

Previous articleಧಾರವಾಡ ಕೃಷಿ ಮೇಳ 2025: 10 ವಿವಿಧ ಹೊಸ ತಳಿ ಅನಾವರಣ
Next articleಧಾರವಾಡ: ಶಾಸಕ ವಿನಯ್ ಕುಲಕರ್ಣಿಗೆ ಮಧ್ಯಂತರ ಜಾಮೀನು

LEAVE A REPLY

Please enter your comment!
Please enter your name here