ನವರಾತ್ರಿಯ ಮೊದಲ ದಿನದಿಂದ ಜಿಎಸ್‌ಟಿ ಉಳಿಕೆ ಉತ್ಸವ ಆರಂಭ

2
170

ನವದೆಹಲಿ: ನಾಳೆಯಿಂದ ಜಿಎಸ್​ಟಿ ಪರಿಷ್ಕೃತ ದರ ಜಾರಿಗೆ ಬರಲಿದ್ದು, ನವರಾತ್ರಿಯ ಮೊದಲ ದಿನದಿಂದ ಜಿಎಸ್‌ಟಿ ಉಳಿಕೆ ಉತ್ಸವ ಆರಂಭವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದರು. ನಾಳೆಯಿಂದ ನವರಾತ್ರಿ ಹಬ್ಬ ಆರಂಭ ಇದರೊಂದಿಗೆ ಜಿಎಸ್‌ಟಿ ಬಚತ್ (ಉಳಿಕೆ) ಉತ್ಸವ ಕೂಡ ಪ್ರಾರಂಭವಾಗಲಿದೆ ಎಂದರು.

ಸೆಪ್ಟೆಂಬರ್​ 22 ರಿಂದ ಜಿಎಸ್​ಟಿ ಪರಿಷ್ಕೃತ ದರ 2.0 ಜಾರಿಗೆ ಬರಲಿದೆ. ಇದರಿಂದಾಗಿ ಮಧ್ಯಮ ವರ್ಗದ ಜನರಿಗೆ ಹೊಸ ಜಿಎಸ್​ಟಿ ಉಪಯೋಗ ಆಗಲಿದೆ. ಜನರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡಬಹುದು.

ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರುವುದು ಮುಖ್ಯವಾಗಿದ್ದು, ಈಗ ಒಂದು ದೇಶ, ಒಂದು ತೆರಿಗೆ ಸಹಕಾರವಾಗಿದೆ ಎಂದರು.

ಜಿಎಸ್‌ಟಿ ಸುಧಾರಣೆಗಳು ದೇಶದ ಬೆಳವಣಿಗೆಗೆ ವೇಗ ನೀಡುತ್ತವೆ ಮತ್ತು ವ್ಯವಹಾರವನ್ನು ಸರಳಗೊಳಿಸುತ್ತವೆ. ಅಷ್ಟೇ ಅಲ್ಲದೇ ಹೂಡಿಕೆಯತ್ತ ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯಲ್ಲಿ ಪ್ರತಿ ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಮೋದಿ ತಿಳಿಸಿದರು.

ನವರಾತ್ರಿಯ ಮೊದಲ ದಿನ(ಸೋಮವಾರ)ದಿಂದ ಜಾರಿಗೆ ಬರುತ್ತಿರುವ ಜಿಎಸ್‌ಟಿ ತೆರಿಗೆ ಪದ್ದತಿಯ ಪರಿಷ್ಕೃತ ವ್ಯವಸ್ಥೆಯು ಆತ್ಮನಿರ್ಭರ ಭಾರತದತ್ತ ದೇಶದ ಮಹತ್ತ್ವದ ಹೆಜ್ಜೆಯಾಗಿದೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆ ತೀವ್ರಗೊಳ್ಳಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸಲ್ಪಡಲಿದೆ. ಅಭಿವೃದ್ಧಿ ಪಥದ ಕಡೆಗೆ ನಮ್ಮ ಓಟದಲ್ಲಿ ಪ್ರತಿಯೊಂದು ರಾಜ್ಯವೂ ಸಮಾನ ಪಾಲುದಾರರಾಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆದಾಯ, ಜಿಎಸ್‌ಗಳೆರಡನ್ನೂ ಸಂಯೋಜಿಸಿದರೆ ವರ್ಷದಲ್ಲಿ ದೇಶದ ಜನರಿಗೆ 2.5 ಲಕ್ಷ ಕೋಟಿ ರೂ ಉಳಿತಾಯವಾಗಲಿದೆ. ಆದ್ದರಿಂದ ಇದು ಉಳಿತಾಯ ಹಬ್ಬ ಎಂದು ಬಣ್ಣಿಸಿದರು.

ರಾಜ್ಯಗಳು ಸ್ವದೇಶಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಿ, ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು ಎಂದು ಸಲಹೆ ನೀಡಿರುವ ಅವರು, ಕೇಂದ್ರ-ರಾಜ್ಯಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಆತ್ಮನಿರ್ಭರ ಭಾರತದ ದೃಷ್ಟಿಕೋನ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 25 ಕೋಟಿ ನವ ಮಧ್ಯಮ ವರ್ಗ ಬಡತನ ಸೋಲಿಸಿದೆ ಎಂದರು.

ತಾಪತ್ರಯಗಳ ನಿವಾರಣೆ: ಜಿಎಸ್ಟಿಯಿಂದ ಅನೇಕ ತಾಪತ್ರಯಗಳು ನಿವಾರಣೆಯಾಗಿವೆ. ಉದ್ಯೋಗದಾತರಿಗೆ ಅನುಕೂಲವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ಅವರು ಹೇಳಿದ್ದಾರೆ. “ನಾನು 2014ರಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಾರಂಭಿಸಿದಾಗ ಬೆಂಗಳೂರಿನಿಂದ 570 ಕಿ.ಮೀ ದೂರದ ಹೈದರಾಬಾದ್‌ಗೆ ಸರಕು ರವಾನಿಸುವುದು ಬಹಳ ಕಷ್ಟ ಎಂದು ಕಂಪನಿಯೊಂದು ಹೇಳಿಕೊಂಡಿತ್ತು. ಬೆಂಗಳೂರಿನಿಂದ ಹೈದರಾಬಾದ್‌ಗೆ ವಸ್ತುಗಳನು ಸಾಗಿಸುವುದಕ್ಕಿಂತ, ಮೊದಲು ಯೂರೋಪ್‌ಗೆ ಸಾಗಿಸಿ, ಅಲ್ಲಿಂದ ವಾಪಸ್ ಹೈದರಾಬಾದ್‌ಗೆ ರವಾನಿಸುವುದು ಸಲೀಸು ಎಂದು ಹೇಳಿಕೊಂಡಿದ್ದು, ಅದು ಫ್ರೆಂಚ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಜಿಎಸ್ಟಿ ಜಾರಿಯ ನಂತರ ಪರಿಸ್ಥಿತಿ ಸುಧಾರಿಸಿದೆ” ಎಂದು ಮೋದಿ ಹೇಳಿದ್ದಾರೆ.

Previous articleಮೈಸೂರು ರತ್ನಸಿಂಹಾಸನದ ರೋಚಕ ಕಥನ
Next articleಕೂಡಲಸಂಗಮ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

2 COMMENTS

LEAVE A REPLY

Please enter your comment!
Please enter your name here