Home Advertisement
Home ಸುದ್ದಿ ದೇಶ ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ

ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ

0
145

ನವದೆಹಲಿ: ಭಾರತದಲ್ಲಿ ಅಡುಗೆ ವಿಧಾನದಲ್ಲಿ ಮಹತ್ವದ ಬದಲಾವಣೆ ತರಬಹುದಾದ ಹೊಸ ತಂತ್ರಜ್ಞಾನವೊಂದು ಗಮನ ಸೆಳೆದಿದೆ. ವಿದ್ಯುತ್ ಬಳಸಿ LPG ಗ್ಯಾಸಿನಂತೆ ಜ್ವಾಲೆ ಉತ್ಪಾದಿಸುವ ವಿಶೇಷ ಒಲೆ (stove) ಯನ್ನು ಭಾರತೀಯ ಕಂಪನಿಯೊಂದು ಪ್ರದರ್ಶಿಸಿದೆ.

ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ನವೀನ ಆವಿಷ್ಕಾರವು ದೇಶದ ಇಂಧನ ಬಳಕೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

LPGಗೆ ಪರ್ಯಾಯ – ವಿದ್ಯುತ್ ಒಲೆ ಹೇಗೆ ಕಾರ್ಯನಿರ್ವಹಿಸುತ್ತದೆ? : ಈ ಹೊಸ ತಂತ್ರಜ್ಞಾನವು ವಿದ್ಯುತ್ ಬಳಸಿ ಜ್ವಾಲೆಯಂತೆಯೇ ಹೀಟ್ ಉತ್ಪಾದಿಸುತ್ತದೆ ಹಾಗೂ LPG ಸ್ಟೌವ್ ಅನುಭವವನ್ನು ನೀಡುತ್ತದೆ. ಅಡುಗೆ ವಿಧಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲದೆ ಬಳಸಬಹುದಾಗಿದೆ. ಇದು ಸಾಮಾನ್ಯ ಇಂಡಕ್ಷನ್ ಸ್ಟೌವ್‌ಗಳಿಗಿಂತ ವಿಭಿನ್ನವಾಗಿದ್ದು, ನೇರ ಜ್ವಾಲೆಯ ಅನುಭವ ನೀಡುವುದು ವಿಶೇಷವಾಗಿದೆ.

PMSuryaGhar ಯೋಜನೆಯ ಜೊತೆ ಸಂಯೋಜನೆ: ಈ ತಂತ್ರಜ್ಞಾನವನ್ನು PM Surya Ghar Yojana ಜೊತೆ ಸಂಯೋಜಿಸಿದರೆ ಮನೆಮನೆಗೆ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಹಾಗೂ ಅಡುಗೆಗೆ ಉಚಿತ ಅಥವಾ ಕಡಿಮೆ ವೆಚ್ಚದ ವಿದ್ಯುತ್ ಬಳಕೆ ಮತ್ತು LPG ಮೇಲಿನ ಅವಲಂಬನೆ ಕಡಿಮೆ ಎಂಬ ಪ್ರಯೋಜನಗಳಿವೆ.

ದೇಶೀಯ ಉತ್ಪಾದನೆಗೆ ಒತ್ತು: ಕೇಂದ್ರ ಸಚಿವರು ಈ ತಂತ್ರಜ್ಞಾನವನ್ನು ಭಾರತದಲ್ಲೇ ಉತ್ಪಾದನೆ ಮಾಡಲು ಆಸಕ್ತಿವಹಿಸುವಂತೆ ಸೂಚಿಸಿದ್ದು ‘Make in India’ ಗೆ ಉತ್ತೇಜನ ಹಾಗೂ ಆಮದು ಕಡಿತ ಮತ್ತು ಸ್ಥಳೀಯ ಉದ್ಯಮಗಳಿಗೆ ಅವಕಾಶ ಎಂದು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಆಯ್ಕೆ : ಈ ತಂತ್ರಜ್ಞಾನವು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ಸ್ವಚ್ಛ ಇಂಧನ ಬಳಕೆಗೆ ಉತ್ತೇಜನ ನೀಡುತ್ತದೆ ಅಲ್ಲದೆ ಹಸಿರು ಶಕ್ತಿಯ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಭವಿಷ್ಯದ ಅಡುಗೆ ವಿಧಾನ?: ಈ ಹೊಸ ವಿದ್ಯುತ್ ಜ್ವಾಲೆ ಒಲೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಗೆ ಅನುಕೂಲಕರವಾಗಿದ್ದು LPG ಬೆಲೆ ಏರಿಕೆಗೆ ಪರ್ಯಾಯ ಪರಿಹಾರವಾಗಿದೆ. ಭಾರತದ ಅಡುಗೆ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ತರಬಹುದಾದ ಸಾಧ್ಯತೆ ಎಂದು ನಿರೀಕ್ಷಿಸಲಾಗಿದೆ.