ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ Indian National Congress ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ತೆಲಂಗಾಣದಿಂದ ಇಬ್ಬರು ಸೇರಿದಂತೆ ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಿಂದ ತಲಾ ಒಬ್ಬರನ್ನು ಪಕ್ಷ ಕಣಕ್ಕಿಳಿಸಿದೆ.
ಅಭ್ಯರ್ಥಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅನುಮೋದನೆ ನೀಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾ; ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪ್ರಕಟಿತ ಅಭ್ಯರ್ಥಿಗಳ ಪಟ್ಟಿ
ತೆಲಂಗಾಣ: ಅಭಿಷೇಕ್ ಮನು ಸಿಂಗ್ವಿ, ವೆಮ್ ನರೇಂದರ್ ರೆಡ್ಡಿ
ಛತ್ತೀಸ್‌ಗಢ: ಫುಲೋ ದೇವಿ ನೇತಮ್
ಹರಿಯಾಣ: ಕರಮ್‌ವೀರ್ ಸಿಂಗ್ ಬೌಧ್
ಹಿಮಾಚಲ ಪ್ರದೇಶ: ಅನುರಾಗ್ ಶರ್ಮಾ
ತಮಿಳುನಾಡು: ಎಂ. ಕ್ರಿಸ್ಟೋಫರ್ ತಿಲಕ್
ಮಾರ್ಚ್ 16ರಂದು ಮತದಾನ: ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16, 2026 ರಂದು ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ರಾಜ್ಯವಾರು ಖಾಲಿ ಸ್ಥಾನಗಳು: ಮಹಾರಾಷ್ಟ್ರ – 7, ತಮಿಳುನಾಡು – 6, ಪಶ್ಚಿಮ ಬಂಗಾಳ – 6, ಬಿಹಾರ – 6, ಒಡಿಶಾ – 4, ಅಸ್ಸಾಂ – 3, ತೆಲಂಗಾಣ – 2, ಛತ್ತೀಸ್‌ಗಢ – 2, ಹರಿಯಾಣ – 2, ಹಿಮಾಚಲ ಪ್ರದೇಶ – 1. ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ರಾಜಕೀಯ ಮಹತ್ವ: ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಗಳ ಸಂಖ್ಯಾಬಲ ಮಹತ್ವಪೂರ್ಣವಾಗಿರುವುದರಿಂದ, ಪ್ರತಿ ರಾಜ್ಯದಲ್ಲೂ ಪಕ್ಷಗಳು ತಂತ್ರ ರೂಪಿಸುತ್ತಿವೆ. ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಮುಖ ನಾಯಕರನ್ನು ಕಣಕ್ಕಿಳಿಸಿದೆ.





















