ಪ್ರೀತಿ ಮಾಡಿದ್ದಕ್ಕೆ ನರಕ ದರ್ಶನ: ಗೋಮಾಂಸ ತಿನ್ನಿಸಿ, ನಮಾಜ್‌ಗೆ ಒತ್ತಾಯ!

1
110

ಪ್ರೀತಿ ಕುರುಡು ನಿಜ, ಆದರೆ ಆ ಪ್ರೀತಿಯ ಹೆಸರಿನಲ್ಲಿ ನಡೆದ ಧಾರ್ಮಿಕ ದೌರ್ಜನ್ಯವೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ ತಪ್ಪಿಗೆ ಯುವಕನೊಬ್ಬನಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ನರಕಯಾತನೆ ನೀಡಿದ ಆಘಾತಕಾರಿ ಘಟನೆ ನಡೆದಿದೆ.

ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ನ್ಯಾಯ ಸಿಗದಿದ್ದಾಗ, ನೊಂದ ಯುವಕ ನೇರವಾಗಿ ಸಚಿವರ ಕಾಲಿಗೆ ಬಿದ್ದು ತನ್ನ ಗೋಳು ತೋಡಿಕೊಂಡಿದ್ದಾನೆ.
ಸಂತ್ರಸ್ತ ಯುವಕನ ಹೆಸರು ಶುಭಮ್ ಗೋಸ್ವಾಮಿ. 2022ರಲ್ಲಿ ಯುವತಿಯೊಬ್ಬಳ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿತ್ತು. ಆರಂಭದಲ್ಲಿ ಜಾತಿ, ಧರ್ಮದ ಹಂಗಿಲ್ಲದೆ ಸಾಗಿದ್ದ ಇವರ ಪ್ರೇಮಕಥೆ, ಮದುವೆಯ ಹಂತಕ್ಕೆ ಬಂದಾಗ ಸ್ವರೂಪ ಬದಲಿಸಿಕೊಂಡಿದೆ.

ಮದುವೆಯಾಗಬೇಕಾದರೆ ನೀನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲೇಬೇಕು ಎಂದು ಯುವತಿಯ ಕುಟುಂಬಸ್ಥರು ಶುಭಮ್‌ಗೆ ಷರತ್ತು ವಿಧಿಸಿದ್ದಾರೆ. ಪ್ರೀತಿಗಾಗಿ ಎಲ್ಲವನ್ನೂ ಸಹಿಸಿಕೊಂಡ ಯುವಕನ ಹೆಸರು ಬದಲಾಯಿಸಿ ‘ಅಮನ್ ಖಾನ್’ ಎಂದು ನಾಮಕರಣ ಮಾಡಿದ್ದಾರೆ.

ಗೋಮಾಂಸ ಭಕ್ಷಣೆ ಮತ್ತು ಸುಳ್ಳು ಕೇಸ್!: ಕೇವಲ ಹೆಸರು ಬದಲಾವಣೆಯಲ್ಲದೆ, ಶುಭಮ್‌ನನ್ನು ಮಾನಸಿಕವಾಗಿಯೂ ಕುಗ್ಗಿಸುವ ಪ್ರಯತ್ನ ನಡೆದಿದೆ. ಆತನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಬಲವಂತವಾಗಿ ದನದ ಮಾಂಸವನ್ನು ತಿನ್ನಿಸಲಾಗಿದೆ. ಅಷ್ಟೇ ಅಲ್ಲದೆ, ದಿನಕ್ಕೆ ಐದು ಬಾರಿ ಕಡ್ಡಾಯವಾಗಿ ನಮಾಜ್ ಮಾಡುವಂತೆ ಹಿಂಸಿಸಿದ್ದಾರೆ.

ಇದನ್ನು ವಿರೋಧಿಸಿದಾಗ ಯುವತಿಯ ಕುಟುಂಬಸ್ಥರು ಶುಭಮ್ ವಿರುದ್ಧವೇ ಸುಳ್ಳು ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ. ಪರಿಣಾಮವಾಗಿ, ಅಮಾಯಕ ಯುವಕ ಸುಮಾರು 5 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು ಎಂಬುದು ಎಂಥವರಲ್ಲೂ ಆಕ್ರೋಶ ಮೂಡಿಸುವಂತಿದೆ.

ಸಚಿವರ ಜನತಾ ದರ್ಬಾರ್‌ನಲ್ಲಿ ನ್ಯಾಯ: ಜೈಲಿನಿಂದ ಹೊರಬಂದ ಶುಭಮ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ರೋಸಿಹೋದ ಆತ, ಮಧ್ಯಪ್ರದೇಶದ ಸಹಕಾರ ಸಚಿವ ವಿಶ್ವಾಸ್ ಸಾರಂಗ್ ಅವರ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ (ಜನತಾ ದರ್ಬಾರ್) ಪಾಲ್ಗೊಂಡು ಕಣ್ಣೀರು ಹಾಕಿದ್ದಾನೆ.

ಯುವಕನ ಕರುಣಾಜನಕ ಕಥೆ ಕೇಳಿ ಕೆಂಡಾಮಂಡಲರಾದ ಸಚಿವರು, ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮತಾಂತರ ಕಾಯ್ದೆಯಡಿ ಕಠಿಣ ಕ್ರಮ: ಸಚಿವರ ಖಡಕ್ ಸೂಚನೆಯ ಮೇರೆಗೆ ಎಚ್ಚೆತ್ತ ಪೊಲೀಸರು, ಯುವತಿಯ ತಂದೆ, ಸಹೋದರ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2021’ ಜಾರಿಯಲ್ಲಿದ್ದು, ಇದರ ಪ್ರಕಾರ ಆಮಿಷ ಅಥವಾ ಬಲವಂತದ ಮತಾಂತರಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಸದ್ಯ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ಸಿಕ್ಕಿದ್ದು, ಶುಭಮ್‌ನನ್ನು ಶಾಸ್ತ್ರೋಕ್ತವಾಗಿ ಮತ್ತೆ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲು (ಘರ್ ವಾಪ್ಸಿ) ಸಚಿವರು ಅಭಯ ನೀಡಿದ್ದಾರೆ.

Previous articleರಕ್ತಸಿಕ್ತವಾಯ್ತು ಭಾನುವಾರ: ತಮಿಳುನಾಡಿನಲ್ಲಿ ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿ, 11 ಸಾವು!
Next articleಖಾಕಿ ಹಾಕುವ ಆಸೆನಾ? ಬೆಂಗಳೂರಿನಲ್ಲಿ ‘ಒಂದು ದಿನದ ಟ್ರಾಫಿಕ್ ಪೊಲೀಸ್’ ಆಗುವ ಗೋಲ್ಡನ್ ಚಾನ್ಸ್!

1 COMMENT

  1. Hey guys, just tried 917betapp and gotta say, it’s pretty smooth! Easy to use and the odds seem decent. Definitely worth checking out if you’re looking for a new place to play. Check them out here: 917betapp

LEAVE A REPLY

Please enter your comment!
Please enter your name here