Home Advertisement
Home ಸುದ್ದಿ ದೇಶ `ಗ್ರ‍್ಯಾಮಿ’ ಗೌರವ ಜಾಗತಿಕ ಜವಾಬ್ದಾರಿಯ ಹಂಚಿಕೆ

`ಗ್ರ‍್ಯಾಮಿ’ ಗೌರವ ಜಾಗತಿಕ ಜವಾಬ್ದಾರಿಯ ಹಂಚಿಕೆ

0
47

ಕಾರವಾರ: ಗ್ರ‍್ಯಾಮಿ ಸಂಗೀತ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು, `ಇದನ್ನು ನಾನು ವೈಯಕ್ತಿಕ ಗೌರವವಾಗಿ ನೋಡದೆ, ಜಾಗತಿಕ ಜವಾಬ್ದಾರಿಯ ಹಂಚಿಕೆಯಾಗಿ ನೋಡುತ್ತಿದ್ದೇನೆ. ವಿಶ್ವದ 8 ಬಿಲಿಯನ್ ಜನರ ಯೋಗಕ್ಷೇಮಕ್ಕೆ ಶಾಂತಿ, ಸಹಾನುಭೂತಿ ಮತ್ತು ಪರಿಸರದ ಕಾಳಜಿ ಅತ್ಯಗತ್ಯ. ಈ ಪ್ರಶಸ್ತಿಯು ಮಾನವೀಯತೆಯ, ಏಕತೆಯ ಸಂದೇಶವನ್ನು ಜಗತ್ತಿನಾದ್ಯಂತ ಹರಡಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಗತ್ತಿನ ಅತ್ಯುನ್ನತ ಸಂಗೀತ ಪ್ರಶಸ್ತಿಯಾದ ಗ್ರ‍್ಯಾಮಿ ಈ ಬಾರಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಮುಡಿಗೇರಿದೆ. ಇದು ಅವರು ಪಡೆದ ಮೊದಲ ಗ್ರ‍್ಯಾಮಿ ಪ್ರಶಸ್ತಿಯಾಗಿದ್ದು, ಆಧ್ಯಾತ್ಮಿಕ ಲೋಕಕ್ಕೆ ಸಂದ ಗೌರವವಾಗಿದೆ.

ದಲೈಲಾಮಾ ಅವರ “ರಿಫ್ಲೆಕ್ಷನ್ಸ್ ಆಫ್ ಹಿಸ್ ಹೊಲಿನೆಸ್ ದಿ ದಲೈಲಾಮಾ” ಎಂಬ ಆಡಿಯೋ ಪುಸ್ತಕಕ್ಕೆ ಈ ಪ್ರಶಸ್ತಿ ಸಂದಿದೆ. ಇದನ್ನು `ಅತ್ಯುತ್ತಮ ಆಡಿಯೋ ಬುಕ್ ನಿರೂಪಣೆ ಮತ್ತು ಕಥೆ ಹೇಳುವ ರೆಕಾರ್ಡಿಂಗ್’ ವಿಭಾಗದಲ್ಲಿ ನೀಡಲಾಗಿದೆ. ಈ ಆಲ್ಬಮ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಭಾವವನ್ನು ಹೊಂದಿದ್ದು, ಸಾವಧಾನತೆ, ಸಾಮರಸ್ಯ ಮತ್ತು ಆರೋಗ್ಯದ ವಿಷಯಗಳನ್ನು ಒಳಗೊಂಡಿದೆ.

90 ವರ್ಷದ ದಲೈಲಾಮಾ ಅವರ ಪರವಾಗಿ ಸಂಗೀತಗಾರ ರೂಫಸ್ ವೈನ್‌ರೈಟ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಟಿಬೆಟಿಯನ್ ಬೌದ್ಧಧರ್ಮದ ಅತ್ಯುನ್ನತ ಧಾರ್ಮಿಕಗುರು ದಲೈಲಾಮಾ ಅವರು ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಕ್ಯಾಂಪ್‌ನಲ್ಲಿ ವಿಶ್ರಾಂತಿಯಲ್ಲಿದ್ದಾರೆ.

Previous articleಚಿನ್ನದ ಸಾಲ ಮರುಪಾವತಿ ವಿಚಾರಕ್ಕೆ ಜಗಳ; ಪತ್ನಿಯನ್ನೇ ಕೊಂದ ಪತಿ