ವಾಟ್ಸಾಪ್‌ಗೆ ಪರ್ಯಾಯ ದೇಸಿ ಆ್ಯಪ್ ಅರಟ್ಟೈ

0
51

ನವದೆಹಲಿ: ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ವಾಟ್ಸಪ್‌ಗೆ ಪರ್ಯಾಯವಾದ ಅರಟ್ಟೈ ಎಂಬ ದೇಶೀಯ ಅಪ್ಲಿಕೇಶನ್ ಈಗ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಚೆನ್ನೈ ಮೂಲದ ಜೊಹೋ ಕಾರ್ಪೋರೇಷನ್ ಈ ಅಪ್ಲಿಕೇಶನ್‌ನನ್ನು 2021ರಲ್ಲಿ ಆರಂಭಿಸಿದರೂ ಈಗ ಅದು ಮುಖ್ಯ ವಾಹಿನಿಯ ಪ್ರಮುಖ ಆಕರ್ಷಣೆಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ದಿನಕ್ಕೆ 3 ಸಾವಿರದಿಂದ 3,50,000ದಷ್ಟು ಸೈನ್ ಅಪ್ ಏರಿಕೆಯಾಗುತ್ತಿದೆ. ಸರ್ಕಾರದ ಅನುಮೋದನೆ, ಸಾಮಾಜಿಕ ಮಾಧ್ಯಮ ವಲಯದಲ್ಲಿ ಭಾರೀ ಪ್ರಚಾರ ಹಾಗೂ ಬೇಹುಗಾರಿಕೆಯಿಂದ ಮುಕ್ತವಾಗಿ ಖಾಸಗಿತನಕ್ಕೆ ಆದ್ಯತೆ ನೀಡಿರುವ ಕಾರಣ ಅದರ ಜನಪ್ರಿಯತೆ ದಿನೇದಿನೇ ಏರುತ್ತಿದೆ. ಅರಟ್ಟೈ ಎಂಬುದು ತಮಿಳು ಪದ. ಇಂಗ್ಲಿಷ್‌ನಲ್ಲಿ ಅದಕ್ಕೆ ಕ್ಯಾಶುವಲ್ ಚಾಟ್ ಎಂದರ್ಥ.

ಈ ಅಪ್ಲಿಕೇಶನ್ ಮೂಲಕ ಸಂದೇಶ ರವಾನೆ, ಚಿತ್ರ ಹಾಗೂ ವಿಡಿಯೋಗಳನ್ನೂ ಹಂಚಿಕೊಳ್ಳಬಹುದು. ಹಾಗೆಯೇ ಧ್ವನಿ ಮತ್ತು ವಿಡಿಯೋ ಕರೆಗಳನ್ನೂ ಮಾಡಬಹುದು. ಇದಲ್ಲದೆ, ಕಥೆಗಳ ಪೋಸ್ಟ್, ದಾಖಲೆಗಳ ರವಾನೆಗೂ ಅನುಕೂಲ. ವಾಟ್ಸಪ್‌ನಂತೆಯೇ ವ್ಯವಹಾರಗಳಿಗೆ ಪ್ರಸಾರ ಚಾನಲ್‌ಗಳನ್ನೂ ರಚಿಸಬಹುದು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಬ್ಬರೂ ಅರಟ್ಟೈ ಅಪ್ಲಿಕೇಶನ್‌ನನ್ನು ಹೊಗಳಿದ್ದಾರೆ.

ಮೋದಿಯವರ ಸ್ವದೇಶಿ ಕರೆ: “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರನ್ನು ಸ್ಥಳೀಯವಾಗಿ ತಯಾರಾದ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಯಾವಾಗಲೂ ಕರೆ ನೀಡಿದ್ದಾರೆ. ಆ ಕರೆಯನ್ನು ಬೆಂಬಲಿಸುವ ಉದ್ದೇಶದಿಂದ, ನಾವು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಭಾರತೀಯ ಆ್ಯಪ್‌ಗಳನ್ನು ಬಳಸಬೇಕು. ಅರಟ್ಟಾಯಿ ಅದಕ್ಕೆ ಉತ್ತಮ ಉದಾಹರಣೆ,” ಎಂದು ಪ್ರಧಾನ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಈ ಅಪ್ಲಿಕೇಶನ್ ಅನ್ನು, ಭಾರತೀಯ ತಂತ್ರಜ್ಞಾನ ಸಂಸ್ಥೆ Zoho Corporation ತಯಾರಿಸಿದ್ದು, ಇದನ್ನು ಅನೇಕರು ಅಮೇರಿಕಾದ ಮೆಟಾ ಕಂಪನಿಯ WhatsApp ಗೆ ಸ್ವದೇಶಿ ಪರ್ಯಾಯವೆಂದು ಪರಿಗಣಿಸುತ್ತಿದ್ದಾರೆ. ಅರೆಟ್ಟೆ ಆ್ಯಪ್‌ನಲ್ಲಿ ಬಳಕೆದಾರರು ಉಚಿತವಾಗಿ ಟೆಕ್ಸ್ಟ್ ಸಂದೇಶಗಳು, ಫೋಟೋ, ವೀಡಿಯೋ, ಡಾಕ್ಯುಮೆಂಟ್ ಹಂಚಿಕೊಳ್ಳಬಹುದು. ಜೊತೆಗೆ ಧ್ವನಿ ಮತ್ತು ವೀಡಿಯೋ ಕರೆಗಳ ಸೌಲಭ್ಯವಿದೆ.

ಗೌಪ್ಯತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಿರುವ ಈ ಆ್ಯಪ್‌ನ ಸರ್ವರ್‌ಗಳು ಭಾರತದಲ್ಲೇ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಿಂದ ಡೇಟಾ ಸುರಕ್ಷತೆ ಹಾಗೂ ಸ್ಥಳೀಯ ತಂತ್ರಜ್ಞಾನ ಬೆಂಬಲಕ್ಕೆ ಒತ್ತು ಸಿಗುತ್ತದೆ.

Previous articleತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಸದ್ಯಕ್ಕೆ ಬಿಗ್ ರಿಲೀಫ್!
Next articleಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರದ ಕುರಿತ ಹೈಕೋರ್ಟ್ ಮಹತ್ವದ ಸೂಚನೆ

LEAVE A REPLY

Please enter your comment!
Please enter your name here