ಲೋಕಸಭೆಯಲ್ಲಿ ಇ-ಸಿಗರೇಟ್ ಬಳಕೆ: ಸ್ಪೀಕರ್‌ಗೆ ಅನುರಾಗ್ ಠಾಕೂರ್ ದೂರು

0
37

ನವದೆಹಲಿ: ಲೋಕಸಭಾ ಸಭಾಂಗಣದಲ್ಲಿ ಸಂಸತ್ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ಇ–ಸಿಗರೇಟ್ ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಗುರುವಾರ ನಡೆದ ಲೋಕಸಭಾ ಕಾರ್ಯಾಚರಣೆಯ ಮಧ್ಯೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಅನುರಾಗ್ ಠಾಕೂರ್ ತಮ್ಮ ಎರಡು ಪುಟದ ಪತ್ರದಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಸಂಸದರೊಬ್ಬರು ಸಭೆಯಲ್ಲೇ ಎಲೆಕ್ಟ್ರಾನಿಕ್ ಸಿಗರೇಟ್ (E-cigarette) ಬಳಸುತ್ತಿರುವುದನ್ನು ಹಲವಾರು ಸದಸ್ಯರು ಕಣ್ಣಾರೆ ಕಂಡಿದ್ದಾರೆ ಎಂದು ಹೇಳಿದ್ದಾರೆ.

“ಪಾರ್ಲಿಮೆಂಟ್‌ ಗೌರವಕ್ಕೆ ಧಕ್ಕೆಯಾದ ಘಟನೆ”: ಠಾಕೂರ್ ತಮ್ಮ ಪತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದು ಸಭೆಯ ಶಿಸ್ತು, ಸಂಸತ್ತಿನ ಗೌರವ ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆ ಇ-ಸಿಗರೇಟ್‌ಗಳ ಉತ್ಪಾದನೆ, ವಹಿವಾಟು, ಜಾಹೀರಾತು ಹಾಗೂ ಬಳಕೆ ಭಾರತದಲ್ಲಿ 2019ರಿಂದಲೇ ನಿಷೇಧಿತ. ಸಂಸತ್ತಿನೊಳಗೆ ಯಾವುದೇ ಪ್ರಕಾರದ ಧೂಮಪಾನ ಸಾಧನಗಳ ಬಳಕೆ 2008ರಿಂದಲೇ ನಿಷೇಧಿತ. ಪಾರ್ಲಿಮೆಂಟ್‌ ಸೀಮಿತ ವಲಯದಲ್ಲಿ ಇ-ಸಿಗರೇಟ್ ಹೊತ್ತಿರುವುದು ಕೂಡ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಠಾಕೂರ್ ಅವರು ಈ ನಡೆ ಸಂಸತ್ತಿನ ಪವಿತ್ರತೆಗೆ ಕಳಂಕ ತಂದು, ದೇಶದ ಯುವಜನತೆಗೆ ಅಪಾಯಕಾರಿ ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ.

ನಿಮ್ಮ ನೇತೃತ್ವದಲ್ಲಿ ಸಂಸತ್ತಿನ ಗೌರವ ಮರೆಯದಂತೆ ಕ್ರಮ ಜರುಗುತ್ತದೆ ಎಂದು ಭರವಸೆಯಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬ್ಯಾಟ್ ಬೀಸಿದ ಬಿ. ವೈ. ವಿಜಯೇಂದ್ರ

Previous articleಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ