Home Advertisement
Home ಕ್ರೀಡೆ ಹಾರ್ದಿಕ್‌ಗಾಗಿ ೧೦೦ ಕೋಟಿ ರೂ ನೀಡಿದ ಶಂಕೆ

ಹಾರ್ದಿಕ್‌ಗಾಗಿ ೧೦೦ ಕೋಟಿ ರೂ ನೀಡಿದ ಶಂಕೆ

0
118

ಮುಂಬೈ: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಬರೋಬರಿ ೧೦೦ ಕೋಟಿ ರೂಗಳ ದೊಡ್ಡ ಮೊತ್ತವನ್ನು ನೀಡಲಾಗಿದೆ ಎಂಬ ಸುದ್ದಿ ಎಲ್ಲಡೇ ಹರಿದಾಡುತ್ತಿದೆ.
ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಸೆಳೆದುಕೊಂಡಿದ್ದಲ್ಲದೇ ಅವರಿಗೆ ತಂಡದ ನಾಯಕತ್ವವನ್ನು ಕೂಡ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡದ ಈ ಕ್ರಮ ರೋಹಿತ್ ಶರ್ಮಾ ಅವರ ಅಭಿಮಾನಿಗಳನ್ನು ಕೆರಳಿಸಿದ್ದಲ್ಲದೇ ತಂಡವು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳನ್ನು ಕೂಡ ಕಳೆದುಕೊಂಡಿತು. ಹಾರ್ದಿಕ್ ಅವರನ್ನು ಮುಂಬೈ ತಂಡ ದೊಡ್ಡ ಮೊತ್ತ ನೀಡಿ ಖರೀಧಿಸಿತೆಂದು ಪತ್ರಿಕೆಯೊಂದು ಬರೆದಿದೆ. ಖಚಿತ ಮೊತ್ತವನ್ನು ಬರೆಯದಿದ್ದರೂ ಕೂಡ ನೂರು ಕೋಟಿ ಹಣ ನೀಡಿದೆ ಎಂದು ಅನಧಿಕೃತ ಮೂಲಗಳಿಂದ ತಿಳಿದು ಬಂದಿದೆ.