ಟೀಮ್ ಇಂಡಿಯಾಕ್ಕೆ 359 ರನ್ ಬೃಹತ್ ಮೊತ್ತ
ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 255 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಲು 359 ರನ್‌ಗಳ ಅವಶ್ಯಕತೆ ಇದೆ, 198/5 ರಿಂದ ದಿನದಾಟ ಆರಂಭಿಸಿದ ಕಿವೀಸ್ ಓವರ್ ನೈಟ್ ಸ್ಕೋರ್ ಗೆ 57 ರನ್ ಸೇರಿಸಿ ಉಳಿದ ಐದು ವಿಕೆಟ್ ಕಳೆದುಕೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 103 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾಕ್ಕೆ 359 ರನ್ ಬೃಹತ್ ಮೊತ್ತ ಗಳಿಸಬೇಕಿದೆ.