ನವದೆಹಲಿ: ಚಿನ್ನ, ಬೆಳ್ಳಿ ಬೆಲೆ ಸೇರಿದಂತೆ ವಿಶ್ವದ ಪ್ರಮುಖ ಸರಕುಗಳ ಬೆಲೆ ಕುಸಿತ ಶೀಘ್ರದಲ್ಲಿಯೇ ಆರಂಭವಾಗಬಹುದು ಎಂದು ಖ್ಯಾತ ಲೇಖಕ ಮತ್ತು ಹೂಡಿಕೆದಾರ ರಾಬರ್ಟ್ ಕಿಯೋಸಾಕಿ ಭವಿಷ್ಯವನ್ನು ನುಡಿದಿದ್ದಾರೆ.
ಷೇರು ಮಾರುಕಟ್ಟೆ, ಡಾಲರ್ ಮತ್ತು ಹೂಡಿಕೆಗಾರರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಲೇ ಇರುವ ಅವರು, ಈಗ ಏರುತ್ತಿರುವ ಬಂಗಾರದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ಗಳ ಬೆಲೆ ಕುಸಿಯಲಿವೆ ಎಂದು ಹೇಳಿದ್ದಾರೆ.
“ಬಬಲ್ಗಳು ಸಿಡಿಯಲು ಪ್ರಾರಂಭಿಸಲಿವೆ. ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾದಾಗ ಬಿಟ್‌ಕಾಯಿನ್ ಕೂಡ ಸಿಡಿಯುತ್ತದೆ. ಒಳ್ಳೆಯ ಸುದ್ದಿ. ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ಗಳ ಬೆಲೆ ಕುಸಿದರೆ…. ನಾನು ಖರೀದಿಸುತ್ತೇನೆ. ಜಾಗರೂಕರಾಗಿರಿ” ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರತಿದಿನ ತಮ್ಮ ಫಾಲೋವರ್ಸ್‌ಗೆ ವಿವಿಧ ರೀತಿಯ ಸಲಗಹೆಗಳನ್ನು ನೀಡುತ್ತಾ ಬಂದಿರುವ ರಾಬರ್ಟ್ ಕಿಯೋಸಾಕಿ, ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿಯಲಿದೆ ಎಂದು ಹೇಳಿರುವುದು ಆಭರಣ ಪ್ರಿಯರು ಫುಲ್ ಖುಷ್ ಆಗಿದ್ದಾರೆ.
ದಿನೇ ದಿನೇ ಏರಿಕೆಯಾಗುತ್ತಲೇ ಇರುವ ಚಿನ್ನ ಈಗ ಲಕ್ಷದ ಗಡಿ ದಾಟಿದೆ. ಹೀಗಾಗಿ ಖರೀದಿ ಹೇಗೆ? ಎಂದು ಚಿಂತೆ ಮಾಡುತ್ತಿದ್ದ ಬಂಗಾರದ ಕನಸು ಕಂಡಿದ್ದವರಿಗೆ ಕಿಯೋಸಾಕಿ ಕೊಂಚ ಖುಷಿ ನೀಡಿದ್ದಾರೆ. ಅಲ್ಲದೇ ಸ್ವತಃ ತಾವೇ ಚಿನ್ನ, ಬೆಳ್ಳಿ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಲಿರುವುದಾಗಿ ಹೇಳಿದ್ದಾರೆ.
“ಹಣ ಕೂಡಿಡುವವರು ಲೂಸರ್ಸ್” ಎಂದು ಹೇಳಿರುವ ರಾಬರ್ಟ್ ಕಿಯೋಸಾಕಿ ಹಣಕ್ಕೆ ಯಾವ ಮೌಲ್ಯವೂ ಇಲ್ಲ. ಹಣ ಕೂಡಿಡುವ ಬದಲು ಎಲ್ಲಿಯಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. 1987ರಲ್ಲಿ ಮಾರುಕಟ್ಟೆ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 1998ರಲ್ಲಿ ಎಲ್ಟಿಸಿಎಂ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 2019ರಲ್ಲಿ ರಿಪೋ ಮಾರುಕಟ್ಟೆ ಕುಸಿದಾಗಲೂ ನಕಲಿ ಡಾಲರ್ ಮುದ್ರಿಸಿದ್ದರು. ಕೋವಿಡ್ ಬಂದಾಗಲೂ ಮುದ್ರಿಸಿದ್ದರು ಎಂದು ಹೇಳಿದ್ದಾರೆ.
ಇದು ಹೊಸ ಬಿಕ್ಕಟ್ಟು ಅಲ್ಲ…. ಅದೇ ಬಿಕ್ಕಟ್ಟು ದೊಡ್ಡದಾಗುತ್ತಿದೆ. ನಕಲಿ ಡಾಲರ್ ಉಳಿಸುವುದನ್ನು ನಿಲ್ಲಿಸಿ ನಿಜವಾದ ಚಿನ್ನ, ಬೆಳ್ಳಿ, ಬಿಟ್‌ಕಾಯಿನ್ ಉಳಿಸಲು ಪ್ರಾರಂಭಿಸಿ. ನಿಮ್ಮ ಸಂಪತ್ತನ್ನು ರಕ್ಷಿಸಿ. ಅಮೆರಿಕ ಇತಿಹಾಸದಲ್ಲಿ ಅತಿದೊಡ್ಡ ಸಾಲಗಾರ ರಾಷ್ಟ್ರ ಎಂದಿರುವ ಅವರು, ಶೀಘ್ರದಲ್ಲೇ ಇತಿಹಾಸದಲ್ಲಿ ಅತಿದೊಡ್ಡ ಕುಸಿತ ಬರಲಿದೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.