ಬೆಂಗಳೂರು: ಬಂಗಾರದ ಬೆಲೆ ಕುಸಿತ ಮತ್ತೆ ಮುಂದುವರಿದಿದೆ. ಶ್ರಾವಣದ ಮೊದಲ ವಾರದಿಂದಲೂ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿದ್ದು ಇಂದು ಕೂಡ 50 ರೂ.ಗಳಷ್ಟು ಪ್ರತಿ ಗ್ರಾಂಗೆ ಕಡಿಮೆಯಾಗಿದೆ.
ಈ ವಾರದ ಆರಂಭದಲ್ಲಿ ಕುಸಿದಿದ್ದ ಚಿನ್ನ ಬುಧವಾರ ಪ್ರತಿ ಗ್ರಾಂಗೆ 225 ರೂ. ಕುಸಿತವಾಗಿತ್ತು. ಹಾಗೆಯೇ ಗುರುವಾರ ಮತ್ತು ಶುಕ್ರವಾರವೂ ಕೂಡ 170 ರೂ.ಗಳಷ್ಟು ಕುಸಿತ ಕಂಡಿತ್ತು.
ಹಬ್ಬ ಹರಿದಿನಗಳಲ್ಲಿ ಬಂಗಾರದ ಅಂಗಡಿಗಳತ್ತ ಮುಖ ಮಾಡುವ ಜನರಿಗೆ ಈ ಕುಸಿತ ಖರೀದಿಗೆ ಉತ್ತಮವಾಗಿದೆ. ಚಿನ್ನ ಮುಂಬರುವ ದಿನಗಳಲ್ಲಿ ಏರಿಕೆಯಾಗಲೂಬಹುದು, ಇಳಿಕೆಯಾಗಲೂಬಹುದು ಆದರೆ ಸದ್ಯಕ್ಕೆ ಕುಸಿದಿರುವುದು ಬಂಗಾರ ಪ್ರಿಯಯರಿಗೆ ಖುಷಿ ತಂದಿದೆ. ಆದರೆ, ಹಳದಿ ಲೋಹದ ಮೋಹ ಇದ್ದವರಿಗೆ ಬೆಲೆ ಎಷ್ಟಿದ್ದರೇನು? ಅಲ್ಲವೇ.
ಕಷ್ಟ ಕಾಲದಲ್ಲಿ ನಮಗೆ ನೆರವಾಗುತ್ತೆ ಎಂದು ಖರೀದಿಸುವವರು ಕೂಡ ಇದ್ದಾರೆ. ಅಂತವರಿಗೆ ಇದು ಸೂಕ್ತ ಕಾಲ ಎಂದು ಹೇಳಬಹುದು. ಚಿನ್ನದ ಜತೆಗೆ ಬೆಳ್ಳಿ ಬೆಲೆಯೂ ಗಣನೀಯ ಇಳಿಕೆ ಕಂಡಿದೆ. 118 ನಿಂದ 116 ರೂ. ಗೆ ಕುಸಿದಿದೆ. ಹಾಗಾದರೆ, ಯಾವ ನಗರದಲ್ಲಿ ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,600 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 99,930 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,600 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,600 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 11,600 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನ: 91,600 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನ: 99,930 ರೂಪಾಯಿ
ಬೆಳ್ಳಿ 10 ಗ್ರಾಂಗೆ: 1,180 ರೂಪಾಯಿ
ವಿವಿಧ ನಗರಗಳಲ್ಲಿ ಚಿನ್ನದ ದರ 22 ಕ್ಯಾರಟ್ (10 ಗ್ರಾಂ)
- ಬೆಂಗಳೂರು – 91,600 ರೂಪಾಯಿ
- ಚೆನ್ನೈ – 91,600 ರೂಪಾಯಿ
- ಮುಂಬೈ – 91,600 ರೂಪಾಯಿ
- ಕೋಲ್ಕತ್ತಾ – 91,600 ರೂಪಾಯಿ
- ಭುವನೇಶ್ವರ್: 91,600 ರೂಪಾಯಿ
- ಹೈದರಾಬಾದ್ – 91,600 ರೂಪಾಯಿ
- ಕೇರಳ: 91,600 ರೂಪಾಯಿ
- ಅಹಮದಾಬಾದ್: 91,650 ರೂಪಾಯಿ
- ನವದೆಹಲಿ – 91,750 ರೂಪಾಯಿ
- ಜೈಪುರ್: 91,750 ರೂಪಾಯಿ
- ಲಕ್ನೋ: 91,750 ರೂಪಾಯಿ