FSL ವರದಿಯನ್ನು ಬಹಿರಂಗಪಡಿಸದಿರುವುದು ಯಾವ ಕಾರಣಕ್ಕೆ?

0
15

ಬೆಂಗಳೂರು: FSL ವರದಿಯನ್ನು ಬಹಿರಂಗಪಡಿಸದಿರುವುದು ಯಾವ ಕಾರಣಕ್ಕೆ? ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿ ಪೋಸ್ಟ್‌ ಮಾಡಿರುವ ಅವರು ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ತಿರುಚಿದ್ದಲ್ಲ, ನಕಲಿಯಲ್ಲವೆಂದು FSL ವರದಿ ನೀಡಿದೆಯೆಂದು ಮಾಧ್ಯಮಗಳು ವರದಿ ಮಾಡಿದೆ.

ಹಾಗಿದ್ದಾಗ FSL ವರದಿಯನ್ನು ಬಹಿರಂಗಪಡಿಸದಿರುವುದು ಯಾವ ಕಾರಣಕ್ಕೆ? ಆರೋಪಿಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೇ?

ಘಟನೆ ನಡೆದ 4ದಿನಗಳ ನಂತರ ಆರೋಪಿಗಳನ್ನು ಬಂಧಿಸಲಾಗಿದೆ, ಇವರನ್ನು ರಕ್ಷಣೆ ಮಾಡುತ್ತಿರುವವರು yaaru? ಘಟನೆ ನಡೆದ ಕೂಡಲೇ ಅದು ಪಾಕಿಸ್ತಾನದ ಪರ ಘೋಷಣೆಯಲ್ಲವೆಂದು ಸರ್ಟಿಫಿಕೇಟ್ ಕೊಟ್ಟ ಕಾಂಗ್ರೆಸ್ ನಾಯಕರು ಹಾಗು ಕೆಲವು ವರದಿಗಾರರು ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದಿದ್ದಾರೆ.

Previous articleಅವರ ಲೇಖನಗಳು, ವರದಿಗಳು ಸದಾ ನಮಗೆ ಮಾರ್ಗದರ್ಶಿಯಾಗಿವೆ
Next articleಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ನಿಧನ