Champions Trophy: ಟಾಸ್ ಗೆದ್ದು ಭಾರತಕ್ಕೆ ಬ್ಯಾಟ್‌ ನೀಡಿದ ನ್ಯೂಜಿಲೆಂಡ್

0
31

ದುಬೈ: ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಎರಡೂ ತಂಡಗಳು ಸೆಮಿಫೈನಲ್ ತಲುಪಿರುವುದರಿಂದ, ಇದು ಔಪಚಾರಿಕ ಪಂದ್ಯವಾಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಎರಡೂ ತಂಡಗಳು ಸೆಮೀಸ್ ಹಾದಿಯನ್ನು ಖಚಿತಪಡಿಸಿಕೊಂಡಿವೆ. ಬ್ಯಾಟಿಂಗ್‌ ಆರಂಬಿಸಿದ ಭಾರತ 3 ನೇ ಓವರಗೆ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿದೆ, 7 ಎಸೆತಗಳಿಗೆ 2 ರನ್‌ ಪಡೆದು ಫೆವಲಿನ್‌ ಸೇರಿದ್ದಾರೆ. ವಿರಾಟ್‌ ಕೊಹ್ಲಿ ಅಂಗಳಕ್ಕೆ ಬಂದಿದ್ದು ಅವರ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.

ಬ್ಯಾಟಿಂಗ್ ಮಾಂತ್ರಿಕನ 300ನೇ ಏಕದಿನ ಪಂದ್ಯ: ಇಂದಿನ ಪಂದ್ಯದ ಮೂಲಕ ಕೊಹ್ಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡುತ್ತಿದ್ದಾರೆ, ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ಹಾಗೂ ವಿಶ್ವದ 22ನೇ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ. ಈ ಆಟವನ್ನು ವಿಕ್ಷಿಸಲು ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ದುಬೈಗೆ ಆಗಮಿಸಿದ್ದು, ಇಂದು ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

Previous articleಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ, ಅವರಾಗೇ ಬಿಡಬೇಕು
Next articleಎಪಿಕ್ ಸಂಖ್ಯೆಗಳಲ್ಲಿ ನಕಲು: ನಕಲಿ ಮತದಾರರನ್ನು ಸೂಚಿಸುವುದಿಲ್ಲ