BPL ಕಾರ್ಡ್‌ನಲ್ಲಿ ಬಡವರಿದ್ದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ

ಚಿಕ್ಕಮಗಳೂರು : ರದ್ದುಪಡಿಸಿರುವ BPL ಕಾರ್ಡ್‌ನಲ್ಲಿ ಬಡವರಿದ್ದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡ್ತೀರಾ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಸಿಎಂ ಪ್ರಶ್ನಿಸಿದರು.
ನಗರದಲ್ಲಿ ಸುದ್ದಗಾರರೊಂದಿಗೆ ಮಾತನಾಡಿ ಅನರ್ಹರರನ್ನು, ನೌಕರರನ್ನು, ಟ್ಯಾಕ್ಸ್ ಕಟ್ಟುವವರ ಕಾರ್ಡುಗಳನ್ನು ರದ್ದುಪಡಿಸಲಿ. ಕಾನೂನು ಪ್ರಕಾರ ಹೋದರೆ ಎಷ್ಟು ಕಾರ್ಡ್ ರದ್ದಾಗುತ್ತದೆ ಲೆಕ್ಕ ಹಾಕಿದ್ದೀರಾ? ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರುಗಳು ಇವರು ನಮ್ಮ ಪಕ್ಷದವರೆಂದು ಕೆಲ ಕಾಡುಗಳನ್ನು ಉಳಿಸಿಕೊಂಡಿದ್ದಾರೆ ಎಂದರು. ಮುಸ್ಲಿಮರಿಗೆ ಮಾತ್ರ ಬಿಪಿಎಲ್ ಕಾರ್ಡ್, ಹಿಂದುಗಳಿಗೆ ಇಲ್ವಾ? ಒಂದು ಕೋಮಿನವರನ್ನು ತೆಗೆದು ಮತ್ತೊಬ್ಬರನ್ನು ಬಿಡುವುದು ಯಾವ ನ್ಯಾಯ? ಎಂದು ಪ್ರಶ್ನಸಿದರು.