Home ಕ್ರೀಡೆ Aus vs Ind: ಪುಷ್ಪ ಸ್ಟೈಲ್‌ನಲ್ಲಿ ನಿತೀಶ್ ಚೊಚ್ಚಲ ಅರ್ಧ ಶತಕದ ಸಂಭ್ರಮ

Aus vs Ind: ಪುಷ್ಪ ಸ್ಟೈಲ್‌ನಲ್ಲಿ ನಿತೀಶ್ ಚೊಚ್ಚಲ ಅರ್ಧ ಶತಕದ ಸಂಭ್ರಮ

0
141

ಅರ್ಧಶತಕ ಸಿಡಿಸಿದ ಬಳಿಕ ಬ್ಯಾಟ್‌ನ್ನು ಥೇಟ್ ಪುಷ್ಪ ಸ್ಟೈಲ್ ನಲ್ಲಿ ಗಡಕ್ಕೆ ಸವರಿ ತಗ್ಗೊದೇ ಇಲ್ಲ ಎಂದು ಎದುರಾಳಿಗಳಿಗೆ ಸಂದೇಶ : ಫಾಲೋ-ಆನ್‌ನಿಂದ ಭಾರತ ಪಾರು

ಮೆಲೊರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟಿಗ ನಿತೀಶ್ ಕುಮಾರ್ ರೆಡ್ಡಿ ಪುಷ್ಪ ಸ್ಟೈಲ್‌ನಲ್ಲಿ ಸಂಭ್ರಮಿಸಿದ್ದಾರೆ.
ಎಂಟನೇ ವಿಕೆಟ್‌ಗೆ ಜತೆಯಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಸಮಯೋಚಿತ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ನಿತೀಶ್ ಕುಮಾರ್ ರೆಡ್ಡಿ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಿರ್ಣಾಯಕ ಘಟ್ಟದ ಹಂತದಲ್ಲಿ ಆಕರ್ಷಕ ಚೊಚ್ಚಲ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 164 ರನ್‌ ಗಳಿಸಿತ್ತು. ಈ ಮೂಲಕ ಇನ್ನೂ 310 ರನ್‌ಗಳ ಹಿನ್ನಡೆಯಲ್ಲಿತ್ತು. ಟೀಂ ಇಂಡಿಯಾ ಫಾಲೋ ಆನ್‌ನಿಂದ ಪಾರಾಗಲು ಇನ್ನೂ 111 ರನ್‌ಗಳ ಅಗತ್ಯವಿತ್ತು. ಮೂರನೇ ದಿನದಾಟದ ಆರಂಭದಲ್ಲೇ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ವಿಕೆಟ್ ಪತನದಿಂದ ಕಂಗಾಲಾಗಿ ಹೋಗಿದ್ದ ಭಾರತ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ಆಸರೆಯಾಗಿದ್ದಾರೆ. ಪರಿಣಾಮ ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್‌ ಭೀತಿಯಿಂದ ಪಾರಾಗಿದೆ.