AICC ಅಧ್ಯಕ್ಷರ ಚುನಾವಣೆ: ಪೈಪೋಟಿ ತುರುಸು

0
100
AICC

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ತಾನು ಸ್ಪರ್ಧಿಯಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ ಬೆನ್ನಲ್ಲೇ ಪೈಪೋಟಿ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿವೆ.
ಈಗಾಗಲೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋತ್ ಮತ್ತು ಸಂಸದ ಶಶಿ ತರೂರ್ ನಡುವೆ ಪ್ರಧಾನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಕೂಡ ಕೇಳಿಬಂದಿರೂ, ಈ ಬಗ್ಗೆ ಚಿತ್ರಣ ಸ್ಪಷ್ಟವಾಗಿಲ್ಲ. ಆದರೆ ಮನೀಶ್ ತಿವಾರಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗಾಗಿ ಗುರುವಾರ ಅಧಿಸೂಚನೆ ಹೊರಬಿದ್ದಿದೆ.

Previous articleNIA ದಾಳಿ: 20 ಮಂದಿ ವಶಕ್ಕೆ
Next articleಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿ ಅಂಗಾಂಗ ರವಾನೆ