8151 ಕೆರೆಗಳ ಸಮೀಕ್ಷೆ 30 ದಿನಗಳ ಒಳಗೆ ಮುಗಿಸಲು ಸೂಚನೆ

ಬೆಂಗಳೂರು: ನೀರಿನ ಪ್ರಮುಖ ಮೂಲವಾದ ಕೆರೆಗಳನ್ನು ಸಂರಕ್ಷಿಸುವಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಬದ್ಧತೆಯ ಹೆಜ್ಜೆಯನ್ನಿಟ್ಟಿದೆ ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದಾದ್ಯಂತ ಜಿಲ್ಲಾ ಪಂಚಾಯತಿಗಳ ಅಧೀನದಲ್ಲಿನ ಕೆರೆಗಳನ್ನು ಗುರುತಿಸುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.

  • ರಾಜ್ಯದ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಕೆರೆಗಳು – 32648
  • ಇದುವರೆಗೂ ಇಲಾಖೆ ಗುರುತಿಸಿರುವ ಕೆರೆಗಳು – 24497
  • ಗುರುತಿಸಲಾಗಿರುವ ಒತ್ತುವರಿಯಾದ ಕೆರೆಗಳು – 9140
  • ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲಾದ ಕೆರೆಗಳು – 4618
  • ಒತ್ತುವರಿ ತೆರೆವುಗೊಳಿಸಿ ವಶಕ್ಕೆ ಪಡೆದ ಭೂಮಿ – 8697 ಎಕರೆ
  • ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿರುವ ಕೆರೆಗಳು – 4522

ಸಮೀಕ್ಷೆ ಬಾಕಿ ಇರುವ 8151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸಬೇಕೆಂದು ನಿರ್ದೇಶನ ನೀಡಲಾಗಿದೆ.

ಜಲಮೂಲಗಳನ್ನು ಉಳಿಸಿಕೊಳ್ಳುವ ಹಾಗೂ ಅಭಿವೃದ್ಧಿಪಡಿಸುವ ಹೊಣೆಗಾರಿಕೆಯಲ್ಲಿ ಸರ್ಕಾರದೊಂದಿಗೆ ಸಮುದಾಯವೂ ಕೈ ಜೋಡಿಸಬೇಕು, ಜಲಮೂಲಗಳೇ ನಮ್ಮ ಜೀವನಾಧಾರ ಎಂಬ ಸತ್ಯವನ್ನು ಅರಿತು ಕಾಪಾಡಿಕೊಳ್ಳುವ ಕೆಲಸದಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ ಎಂದಿದ್ದಾರೆ.