8ರಿಂದ ಪ್ಯಾಸೆಂಜರ್ ರೈಲು ಸಂಚಾರ

0
17

ಮಂಗಳೂರು: ಪಶ್ಚಿಮ ಘಟ್ಟದ ಎಡಕುಮೇರಿ-ಕಡಗರವಳ್ಳಿ ನಡುವೆ ರೈಲು ಹಳಿಗೆ ಗುಡ್ಡ ಕುಸಿತಗೊಂಡಿರುವುದನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿದ್ದು, ಆ. ೮ರಿಂದ
ಪ್ಯಾಸೆಂಜರ್ ರೈಲು ಸಂಚಾರ ಪುನಾರಂಭಗೊಳ್ಳುವುದು ನಿಶ್ಚಿತವಾಗಿದೆ.
ಆ. ೩ರಂದೇ ಹಳಿಯನ್ನು ಸುಸ್ಥಿತಿಗೆ ತರುವ ಕಾರ್ಯ ಮುಕ್ತಾಯಗೊಂಡಿತ್ತು. ಪ್ರಾಯೋಗಿಕವಾಗಿ ರಾತ್ರಿಯೇ ತಾಂತ್ರಿಕ ರೈಲು ಓಡಾಟ ನಡೆಸಲಾಗಿತ್ತು. ಆದರೆ ಗೂಡ್ಸ್ ರೈಲು ಸಂಚಾರ ನಡೆಸಿದ ಬಳಿಕವೇ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುಮತಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಭಾನುವಾರ ಖಾಲಿ ಗೂಡ್ಸ್ ವ್ಯಾಗನ್‌ಗಳು ಸಂಚರಿಸಿದ್ದು, ಸೋಮವಾರ ಮತ್ತು ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಗೂಡ್ಸ್ ರೈಲು ಸಂಚರಿಸಲಿದೆ. ಎಲ್ಲವೂ ಸರಿಯಾಗಿದ್ದರೆ ಬುಧವಾರದಿಂದ ಪ್ಯಾಸೆಂಜರ್ ರೈಲು ಓಡಾಟ ಪುನಾರಂಭಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

Previous articleಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭೇಟಿ, ಪರಿಶೀಲನೆ
Next articleನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟ