ಹುಬ್ಬಳ್ಳಿ: ಕಾಂಗ್ರೆಸ್ 75 ವರ್ಷದಲ್ಲಿ ಶೇ. 15ರಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದರೇ, ದೇಶ ಇಂದು ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿರುತ್ತಿತ್ತು. ಪ್ರಧಾನಿ ಮೋದಿ ಅವರ 11 ವರ್ಷದ ಆಡಳಿತದಲ್ಲಿ ದೇಶದ ಸಾಧನೆ ವಿಶ್ವದ ಭೂಪಟದಲ್ಲಿ ಗುರುತಿಸುವಂತಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಅವಾಸ್ ಯೋಜನೆ 4 ಕೋಟಿ ಮನೆ ನಿರ್ಮಾಣ, ಗರಿಬ್ ಕಲ್ಯಾಣ ಯೋಜನೆ ೮೧ ಕೋಟಿ ಜನರಿಗೆ ಆಹಾರ ವಿತರಣೆ, ಆಯುಷ್ಮಾನ್ ಯೋಜನೆ ೫೦ ಕೋಟಿ ಜನರಿಗೆ ಉಚಿತ ಚಿಕಿತ್ಸೆ, ೮೦೦ ಕಾಲೇಜ್, ೪೯೦ ವಿವಿಗಳು ಸ್ಥಾಪನೆಮಾಡಲಾಗಿದೆ. ರಸ್ತೆ ಅಭಿವೃದ್ಧಿ, ೨.೬ ಲಕ್ಷ ಕೋಟಿ ರೈಲ್ವೆ ಅಭಿವೃದ್ಧಿಗೆ ಇಡಲಾಗಿದೆ. ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ೭,೫೬೪ ಕೋಟಿ ನೀಡಿದೆ ಎಂದು ಹೇಳಿದರು.
ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ೨ ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ೨೦೨೫ಕ್ಕೆ ರೈಲ್ವೆ ವಿದ್ಯುತ್ತೀಕರಣ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರ ರಾಜ್ಯದ ರೈಲ್ವೆ, ಇಂಧನ ಹಾಗೂ ರಸ್ತೆ ಅಭಿವೃದ್ಧಿಗೆ ೫ ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಬೆಂಗಳೂರಿನ ಸೆಕ್ಯೂಲರ್ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಹಣ ಮೀಸಲಿಟ್ಟಿದೆ. ೨೭೧ ಕಿ.ಮೀ. ದೂರ ರೈಲ್ವೆ ಮಾರ್ಗ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ದೇವನಹಳ್ಳಿ ಬಳಿ ಆರನೂರು ಎಕರೆ ರೈಲ್ವೆ ಟರ್ಮಿನಲ್‌ಗೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ನಿಂಗಪ್ಪ ಸುತಗಟ್ಟಿ, ತಿಪ್ಪಣ್ಣ ಮಜ್ಜಗಿ, ಸಂಜಯ ಕಪಟಕರ, ಡಾ. ಕ್ರಾಂತಿಕಿರಣ, ವಿಜಯಾನಂದ ಶೆಟ್ಟಿ, ಈರಣ್ಣ ಜಡಿ, ರವಿ ನಾಯಕ ಇದ್ದರು.