ನವದೆಹಲಿ: 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಇಂದು ಘೋಷಿಸಲಾಯಿತು. ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯ ಸಚಿವ ಎಲ್ ಮುರುಗನ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಲ್ಲಿಸಿದರು. ಪ್ರತಿ ಪ್ರಾದೇಶಿಕ ಭಾಷೆಯಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಿಸಲಾಗಿದೆ.
ಈ ಪ್ರಶಸ್ತಿಗಳಿಗೆ, ಜನವರಿ 1, 2023 ಮತ್ತು ಡಿಸೆಂಬರ್ 31, 2023 ರ ನಡುವೆ CBFC (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಯಿಂದ ಪ್ರಮಾಣೀಕರಣವನ್ನು ಪಡೆದ ಚಲನಚಿತ್ರಗಳಾಗಿವೆ, ಅತ್ಯುತ್ತಮ ಕನ್ನಡ ಭಾಷಾ ಸಿನಿಮಾದಲ ವಿಭಾಗದಲ್ಲಿ ‘ಕಂದೀಲು’ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ವಿವಿಧ ಪ್ರಾದೇಶಿಕ ಭಾಷೆಯ ಅತ್ಯುತ್ತಮ ಸಿನಿಮಾಗಳು: ತೆಲುಗು ಭಾಷೆಯಲ್ಲಿ “ಭಗವಂತ್ ಕೇಸರಿ”, ತಮಿಳು ಭಾಷೆಯಲ್ಲಿ ಅತ್ಯುತ್ತಮ ಸಿನಿಮಾ “ಪಾರ್ಕಿಂಗ್” ಪಂಜಾಬಿ ಭಾಷೆಯಲ್ಲಿ ಅತ್ಯುತ್ತಮ ಸಿನಿಮಾ “ಗುಡ್ಡೆ ಗುಡ್ಡೆ ಚಾ” ಒಡಿಯಾ ಭಾಷೆಯ ಅತ್ಯುತ್ತಮ ಸಿನಿಮಾ “ಪುಷ್ಕರ”
ಮರಾಠಿ ಭಾಷೆಯ ಅತ್ಯುತ್ತಮ ಸಿನಿಮಾ “ಶಾಮಾಚಿ ಆಯಿ”, ಮಲಯಾಳಂ ಭಾಷೆಯ ಅತ್ಯುತ್ತಮ ಸಿನಿಮಾ “ಉಳುಲುಕ್ಕು” ಹಿಂದಿ ಭಾಷೆಯ ಅತ್ಯುತ್ತಮ ಸಿನಿಮಾ “ಕಠಲ್”, ಗುಜರಾತಿ ಭಾಷೆಯ ಅತ್ಯುತ್ತಮ ಸಿನಿಮಾ “ವಶ್”, ಬೆಂಗಾಲಿ ಭಾಷೆಯ ಅತ್ಯುತ್ತಮ ಸಿನಿಮಾ “ಡೀಪ್ ಫ್ರಿಡ್ಜ್” ಹಾಗೂ ಅಸ್ಸಾಮಿ ಭಾಷೆಯ ಅತ್ಯುತ್ತಮ ಸಿನಿಮಾ “ರೊಂಗತಪು” ಚಿತ್ರಗಳಾಗಿವೆ.
ಬೆಸ್ಟ್ ಸ್ಕ್ರಿಪ್ಟ್ (ನಾನ್ ಫಿಚರ್ ಫಿಲ್ಮ್ಸ್) ವಿಭಾಗದಲ್ಲಿ ಮೈಸೂರಿನ ಚಿದಾನಂದ ನಾಯಕ್ ಅವರ ‘ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ’ ಪ್ರಶಸ್ತಿ ಪಡೆದುಕೊಂಡಿದೆ. ಚಿದಾನಂದ ಅವರ ‘ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ’ (Sunflowers Were The First Ones to Know) ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಲಾ ಸಿನೆಫ್ ಪ್ರಶಸ್ತಿ’ ಮುಡಿಗೇರಿಸಿಕೊಂಡಿತ್ತು. ಇದೀಗ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.
ಈ ಭಾರಿ ಪ್ರಶಸ್ತಿ ಪಡೆದ ಕನ್ನಡ ಚಲನಚಿತ್ರ ಕಂದೀಲು’ ಚಿತ್ರವು ಸ್ವಸ್ತಿಕ್ ಎಂಟರ್ಟೈನ್ಮಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟು ಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದದಲ್ಲಿ ಮೂಡಿ ಬಂದಿತ್ತು, ಇತ್ತಿಚೆಗೆ ೧೫ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತಿಮ ಘಟ್ಟದಲ್ಲಿ ೨ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
2024 ರಲ್ಲಿ, 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದಾಗ, ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದರು. ಅತ್ಯುತ್ತಮ ನಟಿ ಗೌರವವನ್ನು ತಿರುಚಿತ್ರಂಬಲಂಗಾಗಿ ನಿತ್ಯಾ ಮೆನೆನ್ ಮತ್ತು ದಿ ಕಚ್ ಎಕ್ಸ್‌ಪ್ರೆಸ್‌ಗಾಗಿ ಮಾನಸಿ ಪರೇಖ್ ಹಂಚಿಕೊಂಡರು. ಅತ್ಯುತ್ತಮ ನಿರ್ದೇಶಕ ಗೌರವ ಸೂರಜ್ ಬರ್ಜಾತ್ಯಾ ಅವರಿಗೆ ಉಂಚೈ ಚಿತ್ರಕ್ಕಾಗಿ ಮತ್ತು ಅತ್ಯುತ್ತಮ ಚಲನಚಿತ್ರವನ್ನು ಮಲಯಾಳಂ ಚಿತ್ರ ಆಟ್ಟಂ ಗೆದ್ದುಕೊಂಡಿತ್ತು.