5 ವರ್ಷದ ಮಗುವಿನ ಅತ್ಯಾಚಾರ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

0
34

ಬಳ್ಳಾರಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ತಪ್ಪಿಸಲು ಯತ್ನಿಸಿದ್ದರಿಂದ ಪೊಲೀಸರು ಗುಂಡಿನ ದಾಳಿ ಮಾಡಿದ ಘಟನೆ ನಡೆದಿದೆ.
ಕಳೆದ ಸೋಮವಾರ ತೋರಗಲ್ಲು ವ್ಯಾಪ್ತಿಯ ಗ್ರಾಮದಲ್ಲಿ ಐದು ವರ್ಷದ ಬಾಲಕಿಯ ಅತ್ಯಚಾರ ನಡೆದಿತ್ತು. ಅತ್ಯಾಚಾರದ ಬಳಿಕ ಆರೋಪಿಯು ಮಗುವನ್ನು ಪಾಳು ಮನೆಯಲ್ಲಿ ಮಗು ಬಿಟ್ಟು ಹೋಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂರು ತಂಡ ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಕಮಲಾಪುರ ಮೂಲದ ಆರೋಪಿ ಮಂಜುನಾಥ್ ಕೊಪ್ಪಳದ ಹುಲಗಿಯಲ್ಲಿ ಪತ್ತೆಯಾಗಿದ್ದನು. ಗುರುವಾರ ಬೆಳಗಿನ ಜಾವ ಸ್ಥಳ ಮಹಜರು ಮಾಡಿಸಲು ಹೋದಾಗ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದಾನೆ. ಹೆಡ್ ಕಾನ್ಸ್​​​ಟೇಬಲ್ ರಘುಪತಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹೀಗಾಗಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಪಿಎಸ್​ಐ ಡಾಕೇಶ್ ಆರೋಪಿಯ ಬಲಗಾಲಿಗೆ ಮೇಲೆ ಪೈರಿಂಗ್ ಮಾಡಿದ್ದರು. ಸದ್ಯ ಆರೋಪಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ
Next articleಇಸ್ರೋ ಐತಿಹಾಸಿಕ ಸಾಧನೆ: ಮೊದಲ ಸ್ಪೇಸ್ ಡಾಕಿಂಗ್ ಯಶಸ್ವಿ