34 ಗ್ರಾಂ ಆಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ

0
128
ಆಟೋ ಚಾಲಕ

ಹುಬ್ಬಳ್ಳಿ: ಆಟೋದಲ್ಲಿ 34 ಗ್ರಾಂ ಆಭರಣವುಳ್ಳ ಬ್ಯಾಗ ಬಿಟ್ಟು ಇಳಿದಿದ್ದ ಮಹಿಳೆಗೆ ಮರಳಿ ಆಭರಣ ತಲುಪಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರಿದಿದ್ದು, ಪೊಲೀಸರು ಆಟೋ ಚಾಲಕನಿಗೆ ಸನ್ಮಾನಿಸಿದ್ದಾರೆ.
ರೈಲ್ವೆ ಉದ್ಯೋಗಿಯ ಪತ್ನಿಯಾಗಿರುವ ಅನಿತಾ ಎಂಬುವರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆಟೋ ಹತ್ತಿ ಅರವಿಂದನಗರದಲ್ಲಿ ಇಳಿಯುವಾಗ ತಮ್ಮ ಬ್ಯಾಗ ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ 34 ಗ್ರಾಂ ಆಭರಣಗಳು ಇದ್ದು, ಹಿಂದಿನ ಆಸನದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಮನಿಸಿ ಆಟೋ ಚಾಲಕನಿಗೆ ತಿಳಿಸಿದ್ದಾರೆ. ಕೂಡಲೇ ಆಟೋ ಚಾಲಕ ರಾಜು ಬಿಂಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬ್ಯಾಗ ತಲುಪಿಸಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸಿಪಿಐ ಅಶೋಕ ಚವ್ಹಾಣ ನೇತೃತ್ವದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಮರಳಿಸಲಾಯಿತು. ಪ್ರಾಮಾಣಿಕತೆ ತೋರಿದ ಆಟೋ ಚಾಲಕನಿಗೆ ಪೊಲೀಸರು ಸನ್ಮಾನಿಸಿದರು.

Previous articleಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ
Next articleಸಿದ್ದರಾಮಯ್ಯ ವಿರುದ್ಧ ಚುನಾವಣ ಅಖಾಡಕ್ಕೆ ವಿಜಯೇಂದ್ರ !