3000 ಗರ್ಭಿಣಿಯರಿಗೆ ಸೀಮಂತದ ಸಡಗರ

0
23

ಬೆಳಗಾವಿ: ಇದೊಂದು ಅಪರೂಪದಲ್ಲಿ ಅಪರೂಪದ ಸಮಾರಂಭ… ಸಂಭ್ರಮ…. ಸಾಮೂಹಿಕ ವಿವಾಹದಂತೆ ಇಲ್ಲಿ ಮೊಟ್ಟಮೊದಲ ಬಾರಿ ಎಂಬಂತೆ ಸಾಮೂಹಿಕ ಸೀಮಂತ ಕಾರ್ಯಕ್ರಮ, ಮೂರು ಸಾವಿರ ಗರ್ಭಿಣಿಯರು ಸಾಕ್ಷಿ…
ಕುಂದಾನಗರಿಯ ಸಿ.ಪಿ.ಎಡ್ ಆಟದ ಮೈದಾನದಲ್ಲಿ ಸೋಮವಾರ ಬೆಳಗ್ಗೆ ೧೦.೩೦ರಿಂದ ಬಲು ಸಡಗರದ ಈ ಸಮಾರಂಭ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಯ ಕಾರ್ಯಕ್ರಮವಿದು. 3000 ಗರ್ಭಿಣಿಯರಿಗೆ ಸೀರೆ, ಹೂವು, ಹಣ್ಣು ಕಾಯಿ, ಅರಿಶಿನ-ಕುಂಕುಮ, ಬಳೆ ಹೀಗೆ ಪಂಚ ಬಗೆಯ ಮಂಗಳಕರ ಸಾಮಗ್ರಿಗಳನ್ನೊಳಗೊಂಡು ಉಡಿ ತುಂಬುವ ಶಾಸ್ತ್ರದೊಂದಿಗೆ ಸೀಮಂತ ನೆರವೇರಿಸಲಾಗುವುದು. ಮುಂಬರುವ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

Previous articleಯಲ್ಲಮ್ಮ ದೇವಿ ದರ್ಶನ ಪಡೆದ ಸಚಿವ ಗುಂಡೂರಾವ್
Next articleಬಸ್ ನಿಲ್ದಾಣದ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌: ಲಕ್ಷಾಂತರ ರು. ಹಾನಿ, ಬೆಂಕಿ ನಂದಿಸಲು ಹರಸಾಹಸ