300 ರೂ.ಗೆ ತಾಯಿ ಕೊಂದ ಮಗ

0
17

ಬೆಳಗಾವಿ: ಕೇವಲ ಮೂರು ನೂರು ರೂ.ಗೆ ಮಗನೊಬ್ಬ ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಗುರಪ್ಪ ತೋಲಗಿ(೭೦) ಕೊಲೆಯಾದ ದುರ್ದೈವಿ. ಈರಣ್ಣ ಗುರಪ್ಪ ತೋಲಗಿ (೩೪) ಕೊಲೆ ಆರೋಪಿ. ತಾಯಿ ಹೆಸರಿನಲ್ಲಿದ್ದ ಒಂದು ಎಕರೆ ಜಮೀನು ವಿಚಾರವಾಗಿ ಪ್ರತಿದಿನ ಈರಣ್ಣ ಸಾರಾಯಿ ಕುಡಿದು ಬಂದು ತಾಯಿಯ ಜೊತೆ ಜಗಳ ಮಾಡುತ್ತಿದ್ದ. ಅಮಲಿನಲ್ಲಿದ್ದ ಈರಣ್ಣ ತೋಲಗಿ ಮೂರು ನೂರು ರೂ. ಕೊಡುವಂತೆ ತಾಯಿಯ ಜೊತೆ ಗಲಾಟೆ ಮಾಡಿದ್ದಾನೆ. ತಾಯಿ ಕೊಡದೇ ಇದ್ದಾಗ ಮನೆಯಲ್ಲಿನ ನೀರು ಕಾಯಿಸುವ ಒಲೆಯಲ್ಲಿದ್ದ ಅರ್ಧ ಸುಟ್ಟಿದ್ದ ಕಟ್ಟಿಗೆ ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆದು ಗೋಡೆಗೆ ತಲೆ ಗುದ್ದಿಸಿದ್ದರಿಂದ ಈ ಘಟನೆ ನಡೆದಿದೆ.

Previous articleಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗುವುದಿಲ್ಲ
Next articleಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಹೊಡೆದು ವಿಕೃತಿ ಮೆರೆದ ಮೆರೆದ ಪತಿ