30ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು: ಜನಾರ್ಧನ ರೆಡ್ಡಿ ಭರವಸೆ

0
17
ರೆಡ್ಡಿ

ಗಂಗಾವತಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) 30ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ ಎಂದು ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಭರವಸೆ ವ್ಯಕ್ತಪಡಿಸಿದರು.
ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ರ‍್ರೀ ಎಂಟ್ರಿಯಾಗಿದ್ದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ನಿದ್ದೆ ಬರುತ್ತಿಲ್ಲ, ನಡುಕ ಶುರುವಾಗಿದೆ ಎಂದರು.
ನನ್ನ ಕ್ಷೇತ್ರದ ತಾಯಿಯಂದಿರು, ಮಹಿಳೆಯರು ಮನೆಯಲ್ಲಿಯೇ ಕುಳಿತು ಬಟ್ಟೆ ವ್ಯಾಪಾರ ಮಾಡುವಂತೆ ಟೆಕ್ಸ್ಟೈಲ್ಸ್ ಪಾರ್ಕ್ ಮಾಡುತ್ತೇನೆ ಎಂದ ಅವರು ಬೇರೆಯವರಂತೆ ಸುಳ್ಳು ಆಶ್ವಾಸನೆ ಕೊಡುವ ಜಾಯಮಾನ ನನ್ನದಲ್ಲ. ಸಂಬಂಧಗಳಿಗ ಬೆಲೆ ಕೊಡುವ ವ್ಯಕ್ತಿ. ದೋಸ್ತಿಯೇ ಬೇರೆ ರಾಜಕಾರಣವೇ ಬೇರೆ. ನಾನು ಜೈಲಿನಲ್ಲಿ ಇದ್ದಾಗ ನನ್ನ ಹೆಂಡತಿ ಅರುಣಾ ಲಕ್ಷ್ಮೀ, ನನ್ನ ಇಬ್ಬರು ಮಕ್ಕಳಿಗೆ ಬಡತನ ಪಾಠ ಹೇಳಿ ಕೊಟ್ಟಿದ್ದಾಳೆ ಎಂದರು. ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾಲಕ್ಷ್ಮೀ ಸ್ಪರ್ಧಿಸುವುದು ಖಚಿತ ಎಂದರು.

Previous articleಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ
Next articleಸರ್ಕಾರಗಳ ವೈಫಲ್ಯ ಖಂಡಿಸಿ ಪ್ರತಿಭಟನೆ